ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 19 FEBRUARY 2024
THIRTHAHALLI : ಮನೆಯಲ್ಲಿದ್ದ ಒಂದು ಮೂಟೆ ಅಡಿಕೆ ಕಳ್ಳತನ ಮಾಡಲಾಗಿದೆ. ನಡುರಾತ್ರಿ ಮನೆಯಲ್ಲಿದ್ದವರು ಎಚ್ಚರವಾದಾಗ ಕಳ್ಳತನ ಬೆಳಕಿಗೆ ಬಂದಿದೆ. ತೀರ್ಥಹಳ್ಳಿ ತಾಲೂಕು ಕೀಗಡಿಯಲ್ಲಿ ಘಟನೆ ಸಂಭವಿಸಿದೆ.
ರುದ್ರಪ್ಪ ಎಂಬುವವರ ಮನೆಯಲ್ಲಿ ಮೂರು ಮೂಟೆ ಅಡಿಕೆ ಇಡಲಾಗಿತ್ತು. ಫೆ.15ರ ರಾತ್ರಿ ಕುಟುಂಬದವರು ಮಲಗುವಾಗ ಅಡಿಕೆ ಇತ್ತು. ಮಧ್ಯರಾತ್ರಿ 2 ಗಂಟೆಗೆ ರುದ್ರಪ್ಪ ಅವರು ಎಚ್ಚರವಾಗಿ, ಕೊಟ್ಟಿಗೆಯಲ್ಲಿದ್ದ ಹಸು ಕರು ಹಾಕಿದೆಯೇ ಎಂದು ಪರಿಶೀಲಿಸಲು ತೆರಳಿದಾಗ ಅಡಿಕೆ ಚೀಲ ನಾಪತ್ತೆಯಾಗಿತ್ತು. ಕಳುವಾದ ಅಡಿಕೆ ಮೂಟೆಯಲ್ಲಿ ಸುಮಾರು 25 ಸಾವಿರ ರೂ. ಮೌಲ್ಯದ 60 ಕೆ.ಜಿ.ಅಡಿಕೆ ಇತ್ತು ಆರೋಪಿಸಲಾಗಿದೆ. ಘಟನೆ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಪೊಲೀಸ್ ಸಿಬ್ಬಂದಿ ಮನೆಯಲ್ಲಿ ಬೀರು ತೆಗೆದ ಕುಟುಂಬದವರಿಗೆ ಕಾದಿತ್ತು ಆಘಾತ, ಏನಾಗಿತ್ತು?
LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು






