ಶಿವಮೊಗ್ಗ ಲೈವ್.ಕಾಂ | SHIMOGA NEWS | 18 ಮೇ 2020
ಮುಂಬೈನಿಂದ ತೀರ್ಥಹಳ್ಳಿಗೆ ಬಂದಿದ್ದ ಪಿ995 ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದವ ಕರೋನ ಪರೀಕ್ಷೆಯ ವರದಿ ಬಂದಿದೆ. 12 ಮಂದಿಯಲ್ಲೂ ಕರೋನ ನೆಗೆಟಿವ್ ಇದೆ. ಇದು ತೀರ್ಥಹಳ್ಳಿ ತಾಲೂಕಿನಾದ್ಯಂತ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಪಿ995 ಮುಂಬೈನಿಂದ ತನ್ನ ಪತ್ನಿಯ ಮನೆಗೆ ಬಂದಿದ್ದರು. ಈ ವೇಳೆ 12 ಜನರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರು. ಈ ಹಿನ್ನೆಯಲ್ಲಿ ಎಲ್ಲರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು. ಮೊದಲ ಹಂತದ ತಪಾಸಣೆ ನಡೆಸಲಾಗಿದ್ದು, ಎಲ್ಲರ ರಿಪೋರ್ಟ್ನಲ್ಲಿ ನೆಗೆಟಿವ್ ಬಂದಿದೆ.
ಮತ್ತೊಂದು ಸುತ್ತಿನ ಪರೀಕ್ಷೆ
ಒಂದು ಸುತ್ತಿನ ಸ್ವಾಬ್ ಟೆಸ್ಟ್ ಪೂರ್ಣಗೊಂಡಿದೆ. ಆದರೆ ಮುಂಜಾಗ್ರತ ಕ್ರಮವಾಗಿ ಕ್ವಾರಂಟೈನ್ ಮುಂದುವರೆಯಲಿದ್ದು, ಮತ್ತೊಂದು ಸುತ್ತಿನ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ 5 ಮತ್ತು 7ನೇ ದಿನ 12 ಮಂದಿಗೆ ಪುನಃ ಗಂಟಲು ದ್ರವ ಪರೀಕ್ಷೆ ನಡೆಸಲಾಗುತ್ತದೆ.
ಚಾಲಕನ ವರದಿ ಮೇಲೆ ಎಲ್ಲರ ಗಮನ
ಪಿ995 ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಆಟೋ ಚಾಲಕ ಕ್ವಾರಂಟೈನ್ಗು ಮೊದಲು ಹಲವರನ್ನು ಭೇಟಿಯಾಗಿದ್ದ. ಹಲವು ಕಡೆಗೆ ತೆರಳಿದ್ದ. ಇದರಿಂದ ತೀರ್ಥಹಳ್ಳಿ ತಾಲೂಕಿನಾದ್ಯಂತ ತೀವ್ರ ಆತಂಕ ಮೂಡಿತ್ತು. ಆದರೆ ಮೊದಲ ಹಂತದ ಪರೀಕ್ಷೆಯಲ್ಲಿ ಕರೋನ ನೆಗೆಟಿವ್ ಬಂದಿರುವುದರಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮತ್ತೊಂದು ಸುತ್ತಿನ ಪರೀಕ್ಷೆಯಲ್ಲೂ ಆತನಿಗೆ ಕರೋನ ನೆಗೆಟಿವ್ ಬರಲಿ ಎಂದು ತಾಲೂಕಿನ ಜನ ಪ್ರಾರ್ಥಿಸುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]