ಶಿವಮೊಗ್ಗ ಲೈವ್.ಕಾಂ | SHIMOGA NEWS | 4 JUNE 2021
ತೀರ್ಥಹಳ್ಳಿ – ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ಕಾಂಕ್ರಿಟ್ಕ ಪೇವ್ಮೆಂಟ್ ನಿರ್ಮಿಸುವ ಹಿನ್ನೆಲ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗ ಸೂಚಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಬಾಳೆಬರೆ ಘಾಟ್ನಲ್ಲಿ 1500 ಮೀಟರ್ನಷ್ಟು ಕಾಂಕ್ರಿಟ್ ಪೇವ್ಮೆಂಟ್ ಕಾಮಗಾರಿ ನಡೆಸಬೇಕಿದೆ. ಹಾಗಾಗಿ ಮೇ 22ರಿಂದ ಜೂನ್ 5ರವರೆಗೆ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಆದರೆ ಈ ನಿಷೇಧದ ಅವಧಿಯನ್ನು ಜೂನ್ 15ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೌಕ್ತೆ ಮತ್ತು ಯಾಸ್ ಚಂಡಮಾರುತಗಳ ಪರಿಣಾಮ ಹಾವಾಮಾನ ವೈಪರಿತ್ಯ ಉಂಟಾಗಿತ್ತು. ಇದರ ಪರಿಣಾಮ ಕಾಮಗಾರಿ ವಿಳಂಬವಾಗಿದೆ. ಹಾಗಾಗಿ ಜೂನ್ 15ರವರೆಗೆ ಬಾಳೆಬರೆ ಘಾಟ್ನಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.
ನಾಲ್ಕು ಪರ್ಯಾಯ ಮಾರ್ಗಗಳು
ರಾಜ್ಯ ಹೆದ್ದಾರಿ 52 ರಿಂದ ತೀರ್ಥಹಳ್ಳಿ ಮೂಲಕ ಕುಂದಾಪುರಕ್ಕೆ ಹೋಗುವ ಲಘು ಹಾಗೂ ಮಧ್ಯಮ ವಾಹನಗಳು ತೀರ್ಥಹಳ್ಳಿ – ಕಾನುಗೋಡು – ನಗರ – ಕೊಲ್ಲೂರು – ಕುಂದಾಪುರ ರಸ್ತೆಗೆ ತಲುಪಬಹುದು.
ತೀರ್ಥಹಳ್ಳಿ – ಯಡೂರು – ಹುಲಿಕಲ್ ಕುಂದಾಪುರಕ್ಕೆ ಹೋಗುವ ಲಘು ಹಾಗೂ ಮಧ್ಯಮ ವಾಹನಗಳು ತೀರ್ಥಹಳ್ಳಿ –ಯಡೂರು –ಮಾಸ್ತಿಕಟ್ಟೆ –ನಗರ –ಕೊಲ್ಲೂರು -ಕುಂದಾಪುರ ರಸ್ತೆಗೆ ತಲುಪಬಹುದು.
ಶಿವಮೊಗ್ಗ ಸಾಗರ ಕಡೆಯಿಂದ ಹೊಸನಗರ ಮೂಲಕ ಕುಂದಾಪುರಕ್ಕೆ ಹೋಗುವ ಲಘು ಹಾಗೂ ಮಧ್ಯಮ ವಾಹನಗಳು ಹೊಸನಗರ – ನಗರ – ಕೊಲ್ಲೂರು – ಕುಂದಾಪುರ ರಸ್ತೆಗೆ ಸೇರಬಹುದಾಗಿದೆ.
ಶಿವಮೊಗ್ಗ / ಸಾಗರ ಹಾಗೂ ತೀರ್ಥಹಳ್ಳಿ ಕಡಯಿಂದ ಕುಂದಾಪುರಕ್ಕೆ ಹೋಗುವ ಭಾರೀ ಪ್ರಮಾಣದ ವಾಹನಗಳು ಬಟ್ಟೆಮಲ್ಲಪ್ಪ – ಸಾಗರ – ಗೇರುಸೊಪ್ಪ – ಹೊನ್ನಾವರ-ಕುಂದಾಪುರ ರಸ್ತೆ ಮೂಲಕ ಸಂಚರಿಸಬಹುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.
ಲಕ್ಷಣ ಕಂಡು ಬಂದ ಕೂಡಲೆ ಪರೀಕ್ಷೆ ಮಾಡಿಸಿಕೊಳ್ಳಿ. ಶಿವಮೊಗ್ಗದಲ್ಲಿ ಸುರಕ್ಷಿತವಾಗಿ ಕೋವಿಡ್ ಪರೀಕ್ಷೆಗೆ ಫೋನ್ ಮಾಡಿ, ರಿಜಿಸ್ಟರ್ ಮಾಡಿಕೊಳ್ಳಿ
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]