ಆಗುಂಬೆ ಬಳಿ ರೈತನ ಮೇಲೆ ಕಾಡುಕೋಣ ದಾಳಿ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 5 ಏಪ್ರಿಲ್ 2022

ಅಡಕೆ ತೋಟಕ್ಕೆ ನುಗ್ಗಿದ್ದ ಕಾಡುಕೋಣ ಓಡಿಸಲು ಹೋಗಿದ್ದ ರೈತನ ಮೇಲೆ ದಾಳಿಯಾಗಿದೆ. ಗಂಭೀರ ಗಾಯಗೊಂಡಿರುವ ರೈತನನ್ನು ಕೂಡಲೆ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರು ಗ್ರಾಮದಲ್ಲಿ ಕಾಡುಕೋಣ ತಿವಿದು ಅಸಿಮನೆ ರಾಘವೇಂದ್ರ ಎಂಬ ರೈತ ಗಂಭೀರ ಗಾಯಗೊಂಡಿದ್ದಾರೆ. ಸೋಮವಾರ ಸಂಜೆ ಆರು ಗಂಟೆ ಹೊತ್ತಿಗೆ ರಾಘವೇಂದ್ರ ತಮ್ಮ ಮನೆ ಮುಂದಿರುವ ಅಡಕೆ ತೋಟಕ್ಕೆ ಬಂದಿದ್ದ ಕಾಡುಕೋಣವನ್ನು ಓಡಿಸಲು ಪತ್ನಿ ಜೊತೆ ಹೋಗಿದ್ದರು.

ಆ ಸಂದರ್ಭ ಕಾಡುಕೋಣ ರಾಘವೇಂದ್ರ ಅವರ ಮೇಲೆ ದಾಳಿ ನಡೆಸಿ ಕೊಂಬಿನಿಂದ ತಿವಿದಿದೆ. ರಾಘವೇಂದ್ರ ಅವರ ಹೊಟ್ಟೆಗೆ ಗಂಭೀರ ಗಾಯವಾಗಿದೆ. ಇದನ್ನು ಕಂಡ ರಾಘವೇಂದ್ರ ಪತ್ನಿ ಪ್ರಜ್ಞೆತಪ್ಪಿ ಬಿದ್ದಿದ್ದರು. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಗ್ರಾಪಂ ಮಾಜಿ ಅಧ್ಯಕ್ಷ ಹಸಿರುಮನೆ ನಂದನ್ ಅವರು ರೈತನನ್ನು ತಮ್ಮ ಕಾರಿನಲ್ಲಿ ಮುಖ್ಯರಸ್ತೆಗೆ ಕರೆತಂದಿದ್ದು ಬಳಿಕ 108 ವಾಹನಕ್ಕೆ ಕರೆ ಮಾಡಿ ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿದೆ. ಮೇಗರವಳ್ಳಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.

Shimoga Nanjappa Hospital cancer care

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment