ಬೈಕ್‌ಗೆ ಡಿಕ್ಕಿ ಹೊಡೆದು ಎಳೆದೊಯ್ದ ಖಾಸಗಿ ಬಸ್‌, ಸವಾರನ ಸ್ಥಿತಿ ಗಂಭೀರ, ಎಲ್ಲಿ? ಹೇಗಾಯ್ತು ಘಟನೆ?

 ಶಿವಮೊಗ್ಗ  LIVE 

ತೀರ್ಥಹಳ್ಳಿ: ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ ಭೀಕರ ಅಪಘಾತ (Bus Rams Bike) ಸಂಭವಿಸಿದೆ. ಘಟನೆಯಲ್ಲಿ ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿದ್ದು, ತೀರ್ಥಹಳ್ಳಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.

ತೀರ್ಥಹಳ್ಳಿಯ ಕುಶಾವತಿಯಲ್ಲಿ ಘಟನೆ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ. ಖಾಸಗಿ ಬಸ್ಸು ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಶಾಲಾ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿತ್ತು. ಕುಶಾವತಿ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಬೈಕ್‌ ಮೇಲೆ ಹತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Sigandur-Janthre-2026-scaled.

Incident-Near-Kushavathi-in-Thirthahalli.

ಇದನ್ನೂ ಓದಿ » ಆಯನೂರಿನಲ್ಲಿ ಭೀಕರ ಅಪಘಾತ, ಇಬ್ಬರು ಸಾವು, ಮೃತದೇಹದ ಮೇಲೆ ಅಚ್ಚಾದ ಟೈರ್‌ ಮಾರ್ಕ್‌

ಕೆಲವು ಮೀಟರ್‌ಗಳಷ್ಟು ದೂರದವರೆಗೆ ಬೈಕು, ಬಸ್ಸಿನ ಅಡಿಯಲ್ಲಿ ರಸ್ತೆಗೆ ಉಜ್ಜಿಕೊಂಡು ಹೋಗಿದೆ. ಬೈಕ್ ಸವಾರನಿಗೆ ತೀವ್ರ ಗಾಯವಾಗಿದೆ ಎಂದು ಸ್ಥಳೀಯರು ತಿಳಿಸಿದ್ದು, ಕೂಡಲೆ ತೀರ್ಥಹಳ್ಳಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಾಲಾ ಮಕ್ಕಳನ್ನು ಕರೆದೊಯ್ಯುವಾಗ ಚಾಲಕ ಇಷ್ಟೊಂದು ವೇಗವಾಗಿ ಬಸ್‌ ಚಲಾಯಿಸಿದ್ದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಘಟನೆಯ ಭೀಕರತೆ ಸಮೀಪದ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತೀರ್ಥಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Incident-Near-Kushavathi-in-Thirthahalli.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment