ಮಂಡಗದ್ದೆ ಬಳಿ ಚಂದ್ರಶೇಖರ ಗುರೂಜಿ ಹೆಂಡತಿ ಮನೆಯಲ್ಲಿ ನೀರವ ಮೌನ

SHIVAMOGGA LIVE NEWS | THIRTHAHALLI | 5 ಜುಲೈ 2022

ಸರಳ ವಾಸ್ತು ಚಂದ್ರಶೇಖರ ಗುರೂಜಿ ಅವರ ಹತ್ಯೆ ವಿಚಾರ ತಿಳಿದು, ಮಂಡಗದ್ದೆ ಸಮೀಪ ಇರುವ ಅವರ ಹೆಂಡತಿ ಮನೆಯಲ್ಲಿ ನೀರವ ಮೌನ ಆವರಿಸಿದೆ. ಒಂದು ತಿಂಗಳ ಹಿಂದೆಯಷ್ಟೆ ಪತ್ನಿಯೊಂದಿಗೆ ಚಂದ್ರಶೇಖರ ಗುರೂಜಿ (Chandrashekhar Guruji) ಅವರು ಇಲ್ಲಿಗೆ ಬಂದಿದ್ದರು.

Shimoga Nanjappa Hospital

ಚಂದ್ರಶೇಖರ ಗುರೂಜಿ ಅವರ ಪತ್ನಿ ಅಂಕಿತಾ ಅವರು, ತೀರ್ಥಹಳ್ಳಿ ತಾಲೂಕು ಮಂಡಗದ್ದೆ ಸಮೀಪದ ಹೆಮ್ಮಕ್ಕಿ ಗ್ರಾಮದವರು. ಮೂರು ವರ್ಷದ ಹಿಂದೆ ಚಂದ್ರಶೇಖರ ಗುರೂಜಿ ಅವರು ಹೆಮ್ಮಕ್ಕಿ ಅಂಕಿತಾ ಅವರನ್ನ ವಿವಾಹವಾಗಿದ್ದರು.

ಕಳೆದ ತಿಂಗಳು ಬಂದಿದ್ದರು

ಚಂದ್ರಶೇಖರ ಗುರೂಜಿ (Chandrashekhar Guruji) ಅವರು ಕಳೆದ ತಿಂಗಳು ಪತ್ನಿ ಅಂಕಿತಾ ಮನೆಗೆ ಬಂದಿದ್ದರು. ಪತ್ನಿಯೊಂದಿಗೆ ಇಲ್ಲಿಯೆ ನಾಲ್ಕಾರು ದಿನ ಉಳಿದಿದ್ದರು ಎಂದು ಅಂಕಿತಾ ಅವರ ಅಜ್ಜಿ ಸಾವಿತ್ರಮ್ಮ ತಿಳಿಸಿದ್ದಾರೆ.

Kalleshwara-Enterprises.webp

ಚಂದ್ರಶೇಖರ ಗುರೂಜಿ ಅವರು ಪತ್ನಿ ಅಂಕಿತಾ ಅವರೊಂದಿಗೆ ಮುಂಬೈನಲ್ಲಿ ನೆಲೆಸಿದ್ದರು. ಹೆಮ್ಮಕ್ಕಿಗೆ ಬಂದಾಗ ಚಂದ್ರಶೇಖರ ಗುರೂಜಿ ಅವರು ಎಲ್ಲರೊಂದಿಗೆ ಬೆರೆಯುತ್ತಿದ್ದರು. ಪ್ರೀತಿ, ಸ್ನೇಹದಿಂದ ಎಲ್ಲರನ್ನು ಮಾತನಾಡಿಸುತ್ತಿದ್ದರು ಎಂದು ಸಾವಿತ್ರಮ್ಮ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮನೆಯಲ್ಲಿ ನೀರವ ಮೌನ

ಚಂದ್ರಶೇಖರ ಗುರೂಜಿ ಅವರ ಹತ್ಯೆಯಾದ ವಿಚಾರ ತಿಳಿಯುತ್ತಿದ್ದಂತೆ ಹೆಮ್ಮಕ್ಕಿಯಲ್ಲಿದ್ದ ಅಂಕಿತಾ ಅವರ ತಂದೆ ರಮೇಶ್ ಮತ್ತು ತಾಯಿ ಶೈಲಾ ಅವರು ಹುಬ್ಬಳಿಗೆ ತೆರಳಿದ್ದಾರೆ. ಅಂಕಿತಾ ಅವರ ಮನೆಯಲ್ಲಿ ನೀರವ ಮೌನ ಆವರಿಸಿದೆ. ಹೆಮ್ಮಕ್ಕಿ ಗ್ರಾಮದಲ್ಲಿ ಗುರೂಜಿಯೊಂದಿಗೆ ಸ್ನೇಹದಿಂದ ಬೆರೆತವರು ಈಗ ಅವರನ್ನು ನೆನೆದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ – ಮುಕ್ಕಾಲು ಮುಳುಗಿದ ರಾಮ ಮಂಟಪ, ಶಿವಮೊಗ್ಗದಲ್ಲೂ ಮಂಟಪದ ಮೇಲ್ಭಾಗದವರೆಗೆ ಬಂತು ನೀರು

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment