SHIVAMOGGA LIVE NEWS | 27 NOVEMBER 2022
ತೀರ್ಥಹಳ್ಳಿ | ಎಲೆ ಚುಕ್ಕೆ ರೋಗದಿಂದ ಅಡಕೆ ಬೆಳೆಗಾರರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ರೋಗ ಕುರಿತು ಖುದ್ದು ಪರಿಶೀಲನೆ ನಡೆಸಿ, ಮಾಹಿತಿ ಸಂಗ್ರಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀರ್ಥಹಳ್ಳಿಗೆ ಭೇಟಿ ನೀಡಿದ್ದರು. ಎಲೆ ಚುಕ್ಕೆ ರೋಗ ಪೀಡಿತ ಕೈಮರ ಗ್ರಾಮದ ತೋಟಕ್ಕೆ ತೆರಳಿ ಪರಿಶೀಲಿಸಿದರು. (cm visit adike farm)
ಎಲೆ ಚುಕ್ಕೆ ರೋಗ ಪೀಡತ ಅಡಕೆ ಮರದ ಗರಿಗಳು, ಅವುಗಳ ಅಡಕೆ ಫಸಲನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪರಿಶೀಲಿಸಿದರು. ಅಧಿಕಾರಿಗಳು, ರೈತರಿಂದ ಮಾಹಿತಿ ಪಡೆದರು.
ರೋಗಪೀಡಿತ ತೋಟಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಅಡಕೆ ಬೆಳೆ ಮತ್ತು ಬೆಳೆಗಾರರನ್ನು ಉಳಿಸುವ ನಿಟ್ಟಿನಲ್ಲಿ ಸರ್ವ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು. (cm visit adike farm)
(cm visit adike farm)
ಸಿಎಂ ಹೇಳಿದೆ 3 ಪ್ರಮುಖಾಂಶ
ಪ್ರಮುಖಾಂಶ 1 – ಕಳೆದ ಎರಡು ವರ್ಷದಿಂದ ನಿರಂತರ ಮಳೆಯಾಗುತ್ತಿದೆ. ಅಡಕೆ ಮರಕ್ಕೆ ಬೇಕಿರುವಷ್ಟು ಪೋಷಕಾಂಶ ಲಭಿಸುತ್ತಿಲ್ಲ. ಹಾಗಾಗಿ ಎಲೆಚುಕ್ಕೆ ರೋಗ ಬಂದು ವ್ಯಾಪಕವಾಗಿ ಹರಡುತ್ತಿದೆ. ತೋಟಗಾರಿಕೆ ವಿಶ್ವವಿದ್ಯಾಲಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಕೇಂದ್ರದ ತಜ್ಞರು ಈ ಕುರಿತು ಅಧ್ಯಯನ ನಡೆಸುತ್ತಿದ್ದಾರೆ.
ಪ್ರಮುಖಾಂಶ 2 – ಎಲೆ ಚುಕ್ಕೆ ರೋಗ ಗಾಳಿಯಲ್ಲಿ ಹರಡುತ್ತಿದೆ. ವ್ಯವಸ್ಥಿತ ನಿರ್ವಹಣೆಯಿಂದ ಇದನ್ನು ತಡೆಗಟ್ಟಬಹುದಾಗಿದೆ. ಈ ಕುರಿತು ವರದಿ ಸಿದ್ಧಪಡಿಸುವಂತೆ ತೋಟಗಾರಿಕೆ ಇಲಾಖೆಗೆ ಸೂಚನೆ ನೀಡಿದ್ದೇನೆ. ತಜ್ಞರ ಸಲಹೆಯಂತೆ ಔಷಧ ವಿತರಣೆ ಮಾಡಲಾಗುತ್ತದೆ. ವ್ಯವಸ್ಥಿತ ನಿರ್ವಹಣೆ ಕುರಿತು ಸೂಕ್ತ ಪ್ಲಾನ್ ಸಿದ್ಧಪಡಿಸುವಂತೆ ಸೂಚಿಸಲಾಗಿದೆ.
ALSO READ – ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶದ ವಿಚಾರ, ಸಂಸದ ರಾಘವೇಂದ್ರ ಮಹತ್ವದ ಹೇಳಿಕೆ
ಪ್ರಮುಖಾಂಶ 3 – 45 ಸಾವಿರ ಹೆಕ್ಟೇರ್ ನಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಎಲೆ ಚುಕ್ಕೆ ರೋಗದಿಂದ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಇದು ಹವಾಮಾನ ಆಧಾರಿತ ಸಮಸ್ಯೆ. ಇದಕ್ಕೆ ವಿಮೆಯು ಇದೆ. ಪರಿಹಾರ ಒದಗಿಸುವ ಕುರಿತು ವರಿದಿ ಬಂದ ಬಳಿಕ ಪರಿಶೀಲಿಸಲಾಗುತ್ತದೆ. ಬಗರ್ ಹುಕುಂ ಮೂಲಕ ತೋಟ ಮಾಡಿರುವವರಿಗು ಪರಿಹಾರದ ಕುರಿತು ಗಮನ ಹರಿಸುತ್ತೇವೆ. ಹಳದಿ ರೋಗ ಬಂದಾಗಲು ಸರ್ಕಾರ ಗಮನ ಹರಿಸಿತ್ತು. ಎಲೆ ಚುಕ್ಕೆ ರೋದ ವಿಚಾರದಲ್ಲಿಯು ಅಧ್ಯಯನ ನಡೆಸುತೇವೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ಗೋವಿಂದ ಕಾರಜೋಳ, ಬಿ.ಎ.ಬಸವರಾಜ, ಶಾಸಕ ಹರತಾಳು ಹಾಲಪ್ಪ, ಸಂಸದ ಬಿ.ವೈ. ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200