ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 3 JUNE 2021
ದನ ಕಳ್ಳತನ ಮಾಡಲು ಬಂದವರು ಸ್ಥಳೀಯರು ಕಂಡು ಸಿನಿಮೀಯ ರೀತಿಯಲ್ಲಿ ಕಾರು ಚಲಾಯಿಸಿ ಎಸ್ಕೇಪ್ ಆಗಿದ್ದಾರೆ. ಸುಮಾರು ಒಂದು ಕಿಲೋ ಮೀಟರ್ನಷ್ಟು ದೂರ ರಿವರ್ಸ್ ಗೇರ್ನಲ್ಲೇ ಕಾರು ಚಲಾಯಿಸಿ ಪರಾರಿಯಾಗಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ತೀರ್ಥಹಳ್ಳಿಯ ಕುವೆಂಪು ಸರ್ಕಲ್ನಲ್ಲಿ ಇದ್ದ ಜಾನುವಾರು ಅಪಹರಿಸಲು ಗೋ ಕಳ್ಳರು ಬಂದಿದ್ದರು ಎಂದು ಹೇಳಲಾಗುತ್ತಿದೆ. ಈ ವೇಳೆ ಅದೇ ಮಾರ್ಗದಲ್ಲಿ ಎದುರಿನಿಂದ ಬಂದ ಯುವ ಕಾಂಗ್ರೆಸ್ ಮುಖಂಡ ಸುದೀಪ್ ಶೆಟ್ಟಿ ಮತ್ತು ಜಾವೇದ್ ಅವರನ್ನು ಕಾಣುತ್ತಿದ್ದಂತೆ ಗೋ ಕಳ್ಳರು ಎಸ್ಕೇಪ್ ಆಗಿದ್ದಾರೆ.
ಒಂದು ಕಿಮೀ ರಿವರ್ಸ್ ಗೇರ್
ಸುದೀಪ್ ಶೆಟ್ಟಿ ಅವರ ಕಾರಿಗೆ ಡಿಕ್ಕಿ ಹೊಡೆದ ಗೋವು ಕಳ್ಳರ ಕಾರು, ಬಳಿಕ ಪರಾರಿಯಾಗಲು ಹಿಮ್ಮುಖವಾಗಿ ಚಲಿಸಿದ್ದಾರೆ. ಸುಮಾರು ಒಂದು ಕಿ.ಮೀ ದೂರ ಕಾರನ್ನು ಹಿಂದಕ್ಕೆ ಚಲಾಯಿಸಿದ್ದಾರೆ. ರಸ್ತೆಯ ಕೊನೆಯಲ್ಲಿ ಕಾರನ್ನು ಉಲ್ಟಾ ತಿರುಗಿಸಿ ಪರಾರಿಯಾಗಿದ್ದಾರೆ. ಈ ವೇಳೆ ರಸ್ತೆಯಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗಳಿಗೆ ಡಿಕ್ಕಿ ಹೊಡೆದು, ಕಾರಿನ ಮಿರರ್ ಪುಡಿಯಾಗಿದೆ. ಗೋವು ಕಳ್ಳರು ಸಿನಿಮೀಯ ರೀತಿಯಲ್ಲಿ ಎಸ್ಕೇಪ್ ಆದ ವಿಡಿಯೋ ವೈರಲ್ ಆಗಿದೆ. ಇಲ್ಲಿದೆ ಅದರ ವಿಡಿಯೋ ರಿಪೋರ್ಟ್
ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ
ಗೋವು ಕಳ್ಳರು ಎಂದು ಹೇಳಲಾತ್ತಿರುವವರು ಸಿನಿಮೀಯ ರೀತಿಯಲ್ಲಿ ಎಸ್ಕೇಪ್ ಆಗಿರುವ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಆದರೆ ಈ ಭಾಗದಲ್ಲಿ ಗೋವುಗಳ ಕಳ್ಳತನವಾಗಿರುವುದು ಈ ಹಿಂದೆಯೂ ವರದಿಯಾಗಿತ್ತು. ಕಾರಿನಲ್ಲಿ ಗೋವುಗಳನ್ನು ಕದ್ದೊಯ್ಯುವ ಕುರಿತು ಆರೋಪಗಳಿವೆ.
ಲಕ್ಷಣ ಕಂಡು ಬಂದ ಕೂಡಲೆ ಪರೀಕ್ಷೆ ಮಾಡಿಸಿಕೊಳ್ಳಿ. ಶಿವಮೊಗ್ಗದಲ್ಲಿ ಸುರಕ್ಷಿತವಾಗಿ ಕೋವಿಡ್ ಪರೀಕ್ಷೆಗೆ ಫೋನ್ ಮಾಡಿ, ರಿಜಿಸ್ಟರ್ ಮಾಡಿಕೊಳ್ಳಿ
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]