ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 28 ಫೆಬ್ರವರಿ 2022
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಮಂಡಗದ್ದೆ ಸಮೀಪ ಕಾಡಾನೆಗಳ ಹಾವಳಿ ಶುರುವಾಗಿದೆ. ತೋಟಗಳಿಗೆ ದಾಳಿ ಮಾಡಿ ಅಡಕೆ, ಬಾಳೆ ಬೆಳೆಗೆ ಹಾನಿ ಮಾಡುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಆನೆಗಳ ಗುಂಪು ಮಂಡಗದ್ದೆ ಸಮೀಪದ ಕೀಗಡಿ, ಮೇಲಿನ ಕೀಗಡಿ, ಮೂಡ್ಲುಮನೆ ಭಾಗದಲ್ಲಿ ಓಡಾಡಿಕೊಂಡಿವೆ. ರಾತ್ರಿ ವೇಳೆ ತೋಟಗಳಿಗೆ ದಾಳಿ ಮಾಡುತ್ತಿರುವ ಆನೆಗಳು ಬೆಳೆ ಹಾನಿ ಮಾಡುತ್ತಿವೆ. ಆದ್ದರಿಂದ ರೈತರು ತೋಟಗಳಿಗೆ ಹೋಗಲು ಹೆದರುತ್ತಿದ್ದಾರೆ.
ಕೀಗಡಿಯ ಶೇಶಪ್ಪ, ಧರ್ಮಣ್ಣಪ್ಪ, ಹೇಮೇಶ್, ಉಪೇಂದ್ರ ಗೌಡ ಅವರ ತೋಟಗಳಿಗೆ ಆನೆಗಳು ದಾಳಿ ಮಾಡಿ ಅಡಕೆ, ಬಾಳೆ ಬೆಳೆಗೆ ನಷ್ಟ ಉಂಟು ಮಾಡಿವೆ ಎಂದು ತಿಳಿದು ಬಂದಿದೆ. ಬಾಳೆ ಬೆಳೆ ಕಟಾವಿಗೆ ಬಂದ ವೇಳೆ ದಾಳಿ ನಡೆಸಿದ್ದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.