ಮಂಡಗದ್ದೆ ಬಳಿ ಬೈಕ್ ಅಪಘಾತ, ಗಾಯಾಳುಗಳಿಗೆ ನೆರವಾದ ಗೃಹ ಸಚಿವರು, ಸಿಬ್ಬಂದಿ | VIDEO NEWS

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | MANDAGADDE NEWS | 13 ನವೆಂಬರ್ 2021

ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದವರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಅವರ ಬೆಂಗಾವಲು ಸಿಬ್ಬಂದಿ ನೆರವಾಗಿದ್ದಾರೆ. ಗಾಯಾಳುಗಳಿಗೆ ಆರೈಕೆ ಮಾಡಿ, ಎಸ್ಕಾರ್ಟ್ ವಾಹನದಲ್ಲಿ ಶಿವಮೊಗ್ಗದ ಆಸ್ಪತ್ರೆಗೆ ಕರೆ ತಂದಿದ್ದಾರೆ.

ಮಂಡಗದ್ದೆ ಕಾಡಿನಲ್ಲಿ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಬೈಕ್ ಸವಾರರು ಗಾಯಗೊಂಡಿದ್ದು ರಸ್ತೆಯಲ್ಲಿ ನರಳಾಡುತ್ತಿದ್ದರು. ಈ ವೇಳೆ ವಾಹನ ಸವಾರರು ಗಾಯಾಳುಗಳಿಗೆ ನೆರವಾಗಿದ್ದರು.

ನೆರವಾದರು ಸಚಿವರು, ಸಿಬ್ಬಂದಿ

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದರು. ಶಿವಮೊಗ್ಗದಲ್ಲಿ ನಡೆಯುತ್ತಿರುವ ಕಾರ್ಯಕ್ರವೊಂದರಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದರು. ಅಪಘಾತ ಆಗಿರುವುದು ತಿಳಿಯುತ್ತಿದ್ದಂತೆ ಕಾರಿನಿಂದ ಇಳಿದು ನೆರವಿಗೆ ಧಾವಿಸಿದರು.

ಗಾಯಾಳುಗಳಿಗೆ ನೀರು ಕುಡಿಸಿ, ಆರೈಕೆ ಮಾಡಿದರು. ಅಲ್ಲದೆ ತಮ್ಮ ಎಸ್ಕಾರ್ಟ್’ಗೆ ಬಂದಿದ್ದ ಪೊಲೀಸ್ ಜೀಪಿನಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಪೊಲೀಸ್ ಸಿಬ್ಬಂದಿಗೆ ಸೂಚಿಸಿದರು.

ಆಸ್ಪತ್ರೆಗೆ ಫೋನ್ ಮಾಡಿ ಮಾಹಿತಿ

ಇನ್ನು, ಘಟನೆ ಸಂಬಂಧ ಗಾಯಾಳುಗಳಿಗೆ ಕೂಡಲೆ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಅಸ್ಪತ್ರೆಗೆ ಸಿಬ್ಬಂದಿಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ ನೀಡಿದರು. ಗಾಯಾಳುಗಳಿಬ್ಬರು ತೀರ್ಥಹಳ್ಳಿ ಮೂಲದವರು ಎಂದು ತಿಳಿದು ಬಂದಿದೆ.

ಈ ಹಿಂದೆಯೂ ನೆರವಾಗಿದ್ದರು

ತೀರ್ಥಹಳ್ಳಿ ತಾಲೂಕಿನಲ್ಲಿ ಈ ಹಿಂದೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ತಮ್ಮದೆ ಕಾರಿನಲ್ಲಿ ಕರೆದೊಯ್ದಿದ್ದರು. ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದರು.

ಆರೋಗ್ಯದ ಬಗ್ಗೆ ಕಾಳಜಿ ಅತಿ ಮುಖ್ಯ, ಕಾಯಿಲೆ ಲಕ್ಷಣ ತಿಳಿದುಕೊಂಡರೆ ದೊಡ್ಡ ಅನಾಹುತದಿಂದ ಪಾರಾಗಬಹುದು. ಕಡಿಮೆ ದರದಲ್ಲಿ ಗುಣಮಟ್ಟದ ಟೆಸ್ಟಿಂಗ್ ಇಲ್ಲಿ ಲಭ್ಯ.

AVvXsEhukSpxMutW2NK9VKGYCJZbo5D pjw3GRDkWyD3QT v 5zYVwEgeYE3aEDsovr8qrBA UQyz9AQDDex3S4rTo4az0PahRQVwBlAZyMtGiVPmjIGkU LSlNTwwcQIsaKN5pfZRF1fn83VRNvDL6sSTDmd1NurZc7

 

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : November 13, 2021

Leave a Comment