ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 23 ಜುಲೈ 2020
ತೀರ್ಥಹಳ್ಳಿ ತಾಲೂಕು ಕನ್ನಂಗಿಯಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿದ್ದ ವ್ಯಕ್ತಿಗೆ ಕರೋನ ಸೋಂಕು ತಗುಲಿದೆ. ಈತನಿಂದ ಹೇರ್ ಕಟ್ ಮಾಡಿಸಿಕೊಂಡವರಲ್ಲಿ ಈಗ ಅತಂಕ ಸೃಷ್ಟಿಯಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕ್ಷೌರಿಕನಿಗೆ ಸೋಂಕು ತಗುಲಿದ್ದು ಹೇಗೆ?
ಕನ್ನಂಗಿ ಸಮೀಪದ ಕಳ್ಳಿಗದ್ದೆ ಗ್ರಾಮದಲ್ಲಿ ಜೂನ್ 30ರಂದು ನಿಧನರಾಗಿದ್ದ ಮಹಿಳೆಯ ಅಂತ್ಯಕ್ರಿಯೆಗೆ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಸಂಬಂಧಿಗಳು ಬಂದಿದ್ದರು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದವರು ಸೇರಿ ಆ ಕುಟುಂಬದ 9 ಮಂದಿಗೆ ಸೋಂಕು ತಗುಲಿದೆ. ಇವರಲ್ಲಿ ಕೆಲವರಿಗೆ ಕನ್ನಂಗಿಯ 31 ವರ್ಷದ ಕ್ಷೌರಿಕ ಹೇರ್ ಕಟ್ ಮಾಡಿದ್ದರು.
ಈಗ ಕ್ಷೌರಿಕನಿಗೆ ಸೋಂಕು ತಗುಲಿದೆ. ಸೋಂಕಿತನ ಮನೆ ಬಳಿ ಕಂಟೈನ್ಮೆಂಟ್ ಜೋನ್ ರಚಿಸಲಾಗಿದೆ. ಇನ್ನು, ಈತನಿಂದ ಹೇರ್ ಕಟ್ ಮಾಡಿಸಿಕೊಂಡಿರುವ 13 ಜನರನ್ನು ಗುರುತಿಸಲಾಗಿದೆ. ಕಡ್ಡಾಯವಾಗಿ ಹೋಂ ಕ್ವಾರಂಟೈನ್ನಲ್ಲಿ ಇರುವಂತೆ ಸೂಚಿಸಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]