ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 AUGUST 2023
SHIMOGA : ಇಸ್ರೋದ ಚಂದ್ರಯಾನ 3 (Chandrayaan 3) ಯೋಜನೆಯ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಇಳಿದಿದೆ. ವಿಜ್ಞಾನಿಗಳ ಕಾರ್ಯವನ್ನು ಭಾರತೀಯರು ಕೊಂಡಾಡುತ್ತಿದ್ದಾರೆ. ಈ ಯೋಜನೆಯಲ್ಲಿ (Chandrayaan 3) ಶಿವಮೊಗ್ಗದ ವಿಜ್ಞಾನಿಯೊಬ್ಬರು ಕಾರ್ಯ ನಿರ್ವಹಿಸಿದ್ದು, ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ತೀರ್ಥಹಳ್ಳಿ ತಾಲೂಕು ಕೋಣಂದೂರಿನ ಕೆ.ಎಲ್.ಶಿವಾನಿ ಅವರು ಇಸ್ರೋದ ಚಂದ್ರಯಾನ 3 ಯೋಜನೆಯಲ್ಲಿ ಕಾರ್ಯನರ್ವಹಿಸುತ್ತಿದ್ದಾರೆ. ಇಸ್ರೋದ ಟೆಲಿಮೆಟ್ರಿ ಟ್ರ್ಯಾಕಿಂಗ್ ಅಂಡ್ ಕಮಾಂಡ್ ನೆಟ್ವರ್ಕ್ ವಿಭಾಗದ ಡೆಪ್ಯೂಟಿ ಡೈರೆಕ್ಟರ್ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ಮಾಜಿ ಎಂಎಲ್ಎ ಪುತ್ರಿ
ವಿಜ್ಞಾನಿ ಕೆ.ಎಲ್.ಶಿವಾನಿ ಅವರು ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಅವರ ಪುತ್ರಿ. ಚಂದ್ರಯಾನ 3 ಯಶಸ್ವಿ ಆಗುತ್ತಿದ್ದಂತೆ ಕೋಣಂದೂರು ಲಿಂಗಪ್ಪ ಅವರಿಗೆ ಸಂಬಂಧಿಗಳು, ಸ್ನೇಹಿತರು, ಹಿತೈಷಿಗಳು ಕರೆ ಮಾಡಿ ಶುಭಾಶಯ ತಿಳಿಸುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಕೋಣಂದೂರು ಲಿಂಗಪ್ಪ, ಚಂದ್ರಯಾನ ಯಶಸ್ವಿಯಾಗುತ್ತಿದ್ದಂತೆ ಮಗಳಿಗೆ ಕರೆ ಮಾಡಿದೆ. ಶುಭಾಶಯ ತಿಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಸ್ರೋಗೆ ಭೇಟಿ ನೀಡಿದ್ದಾಗ ಶಿವಾನಿಯವರ ಜೊತೆಗೆ ಮಾತನಾಡಿದರಂತೆ. ಯೋಜನೆ ಯಶಸ್ವಿಯಾಗಿದ್ದಕ್ಕೆ ಸಂತೋಷವಿದೆ. ಇದು ಸಣ್ಣ ಸಾಧನೆಯಲ್ಲ. ನಾವೆಲ್ಲರು ಹೆಮ್ಮೆ ಪಡುವ ಸಂಗತಿ ಎಂದರು.
ಇದನ್ನೂ ಓದಿ – ಸಿಗಂದೂರಿನಲ್ಲಿ ಹೋಮ, ಪೂಜೆ, ದರ್ಗಾದಲ್ಲಿ ವಿಶೇಷ ಪ್ರಾರ್ಥನೆ, ಚಂದ್ರಯಾನ 3 ಯಶಸ್ಸಿಗೆ ಎಲ್ಲೆಲ್ಲಿ ಹೇಗಿದೆ ಹಾರೈಕೆ?
ವಿಜ್ಞಾನಿ ಶಿವಾನಿ ಶಿವಮೊಗ್ಗದ ವಿದ್ಯಾರ್ಥಿನಿ
ಇಸ್ರೋ ವಿಜ್ಞಾನಿ ಕೆ.ಎಲ್.ಶಿವಾನಿ ಅವರು ಶಿವಮೊಗ್ಗದ ಜವಾಹರಲಾಲ್ ನೆಹರು ರಾಷ್ಟ್ರೀಯ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ. 1992ರಲ್ಲಿ ಈ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ ಪದವಿ ಪಡೆದರು. 1993ರಲ್ಲಿ ಡಾ. ಯು.ಆರ್.ರಾವ್ ಅವರು ಇಸ್ರೋದ ಅಧ್ಯಕ್ಷರಾಗಿದ್ದಾಗ ಸಂಸ್ಥೆಗೆ ಸೇರಿದರು. ಅಂದಿನಿಂದ ಬಾಹ್ಯಾಕಾಶದ ವಿವಿಧ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ.
ಚಂದ್ರಯಾನ 3 ಯಶಸ್ವಿಯಾಗುತ್ತಿದ್ದಂತೆ ಕೆ.ಎಲ್.ಶಿವಾನಿ ಅವರ ಕುಟುಂಬದವರು, ಸ್ನೇಹಿತರು ಅಭಿನಂದನೆ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಕುರಿತು ಹೆಮ್ಮೆಯ ನುಡಿಗಳನ್ನು ಪ್ರಕಟಿಸುತ್ತಿದ್ದಾರೆ.