ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 8 MARCH 2021
ರೈತ ಮಹಾಪಂಚಾಯತ್ ಸಮ್ಮೇಳನಕ್ಕೆ ತೀರ್ಥಹಳ್ಳಿ ತಾಲೂಕಿನಿಂದ ಐದು ಸಾವಿರ ರೈತರನ್ನು ಸೇರಿಸಲು ನಿರ್ಧರಿಸಲಾಗಿದೆ. ರೈತ ಸಂಘದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಇದಕ್ಕಾಗಿ ಹೋಬಳಿ ಮಟ್ಟದಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ತೀರ್ಥಹಳ್ಳಿಯ ಗೋಪಾಲಗೌಡ ರಂಗಮಂದಿರದಲ್ಲಿ ರೈತ ಸಂಘದ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ತಾಲೂಕಿನಿಂದ ದೊಡ್ಡ ಸಂಖ್ಯೆಯ ರೈತರು ಮಹಾ ಪಂಚಾಯತ್‍ನಲ್ಲಿ ಪಾಲ್ಗೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 10ರಂದು ಮತ್ತೂರು ಹೋಬಳಿ, ಮಾ.11ರಂದು ಆಗುಂಬೆ, ಮಾ.12 ಮಂಡಗದ್ದೆ, ಮಾ.13ರಂದು ಅಗ್ರಹಾರ, ಮಾ.14ರಂದು ನಗರದಲ್ಲಿ ಪೂರ್ವಭಾವಿ ಸಭೆಗಳನ್ನು ಕರೆಯಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಮಹಾ ಪಂಚಾಯತ್, ಲೋಗೋ ಬಿಡುಗಡೆ, ಲಕ್ಷ ಜನರ ಸಮಾವೇಶಕ್ಕೆ ಜಾಗ ಫಿಕ್ಸ್
ರೈತ ಮುಖಂಡ ಕಂಬ್ಳಿಗೆರೆ ರಾಜೇಂದ್ರ ಅವರು ಸಭೆಯಲ್ಲಿ ಮಾತನಾಡಿ, ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆಗಳಿಗೆ, ಭೂ ಸುಧಾರಣಾ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿ, ಅದರ ಪರಿಣಾಮಗಳ ಕುರಿತು ಸಭೆಗೆ ವಿವರಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಕೋಡ್ಲು ವಂಕಟೇಶ್ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷ ಭುಜಂಗಶೆಟ್ಟಿ, ಕಾರ್ಯದರ್ಶಿ ಹೊರಬೈಲು ರಾಮಕೃಷ್ಣ, ತನಿಕಲ್ ರಾಜಣ್ಣ, ನಿಶ್ಚಲ್, ನೆಂಪೆ ದೇವರಾಜ್, ಕೊರೊಡಿ ಕೃಷ್ಣಪ್ಪ, ಹೊಸಕೊಪ್ಪ ಸುಂದರೇಶ್, ಎಸ್.ಟಿ.ದೇವರಾಜ್ ಸೇರಿದಂತೆ ಹಲವರು ಸಭೆಯಲ್ಲಿದ್ದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]