ತೀರ್ಥಹಳ್ಳಿಯ ಐದು ಶಾಲೆಗಳು ಸೇರಿ ರಾಜ್ಯದ 72 ಸರ್ಕಾರಿ ಶಾಲೆ ದತ್ತು, ಸ್ಮಿತಾ ಅವರಿಗೆ ಗೌರವ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

147011183 1327318294296254 3834645892722110036 o.jpg? nc cat=105&ccb=3& nc sid=8bfeb9& nc ohc=ZNUWIDTXgPcAX9FSFBC& nc ht=scontent.fixe1 2

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 26 FEBRUARY 2021

ರಾಜ್ಯದ 72 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು, ಮೂಲ ಸೌಕರ್ಯ ಅಭಿವೃದ್ಧಿಪಡಿಸಿದ ತೀರ್ಥಹಳ್ಳಿಯ ಸ್ಮಿತಾ ಅವರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸನ್ಮಾನಿಸಿದ್ದಾರೆ.

ತೀರ್ಥಹಳ್ಳಿಯ ಮೂರು ಸರ್ಕಾರಿ ಪ್ರೌಢ ಶಾಲೆ, ಎರಡು ಪ್ರಾಥಮಿಕ ಶಾಲೆಗಳು ಸೇರಿದಂತೆ ರಾಜ್ಯದ 72 ಶಾಲೆಗಳನ್ನು ಕೇರ್ ವರ್ಕ್ಸ್ ಫೌಂಡೇಶನ್‍ ವತಿಯಿಂದ ದತ್ತು ಪಡೆಯಲಾಗಿದೆ. ಶಿಕ್ಷಣ ಮತ್ತು ತರಬೇತಿ ಸಂಸ್ಥೆಗೆ ಅಗತ್ಯವಿರುವ ರೆಕಾರ್ಡಿಂಗ್ ಸ್ಟೂಡಿಯೋ ನಿರ್ಮಿಸಿ ಕೊಟ್ಟಿದ್ದಾರೆ. ಹಾಗಾಗಿ ತೀರ್ಥಹಳ್ಳಿಯ ಸ್ಮಿತಾ ಅವರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸನ್ಮಾನಿಸಿದರು.

ಖಾಸಗಿ ನ್ಯೂಸ್ ಚಾನೆಲ್ ಮತ್ತು ರೋಟರಿ ಸಂಸ್ಥೆಯ ಸಹಯೋಗದಲ್ಲಿ  ಮಕ್ಕಳಿಗೆ ಟ್ಯಾಬ್ ವಿತರಿಸಲಾಯಿತು. ಈ ಸಂದರ್ಭ ತೀರ್ಥಹಳ್ಳಿಯ ಗುಡ್ಡೇಕೇರಿ, ಕೋಡ್ಲು, ಕೋಣಂದೂರಿನ ಮೂರು ಸರ್ಕಾರಿ ಪ್ರೌಢಶಾಲೆಯ 109 ಮಕ್ಕಳಿಗೆ ಉಚಿತವಾಗಿ ಟ್ಯಾಬ್ ಸಿಗುವಲ್ಲಿ ಸ್ಮಿತಾ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment