ತಾಲೂಕು ಕಚೇರಿಗೆ MLA ದಿಢೀರ್‌ ಭೇಟಿ, ಅಧಿಕಾರಿ, ಸಿಬ್ಬಂದಿಗಳ ಕುರ್ಚಿ ಖಾಲಿ ಖಾಲಿ, ಮುಂದೇನಾಯ್ತು?

SHIVAMOGGA LIVE | 31 JULY 2023

THIRTHAHALLI : ಮಾಜಿ ಸಚಿವ ಆರಗ ಜ್ಞಾನೇಂದ್ರ ಇವತ್ತು ತೀರ್ಥಹಳ್ಳಿ ತಾಲೂಕು ಕಚೇರಿಗೆ ದಿಢೀರ್‌ ಭೇಟಿ (Sudden Visit) ನೀಡಿ ಪರಿಶೀಲಿಸಿದರು. ಈ ವೇಳೆ ಅಧಿಕಾರಿಗಳ ಕುರ್ಚಿಗಳು ಖಾಲಿ ಇದ್ದಿದ್ದನ್ನು ಕಂಡು ಆಕ್ರೋಶಗೊಂಡರು.

PARISHRAMA NEET ACADEMY

ಸಂಜೆ 4.30ರ ಹೊತ್ತಿಗೆ ತಾಲೂಕು ಕಚೇರಿಗೆ ಶಾಸಕ ಆರಗ ಜ್ಞಾನೇಂದ್ರ ಹಠಾತ್‌ ಭೇಟಿ ನೀಡಿದ್ದರು. ಈ ವೇಳೆ ವಿವಿಧ ಸೆಕ್ಷನ್‌ಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ ಇಲ್ಲದಿರುವುದನ್ನು ಕಂಡು ಸಿಟ್ಟಾದರು. ಕೂಡಲೆ ರಿಜಿಸ್ಟರ್‌ ತರಿಸಿಕೊಂಡು ಪರಿಶೀಲನೆ ನಡೆಸಿದರು.

ಇದನ್ನೂ ಓದಿ – ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗದಲ್ಲಿ ನಂದಿನಿ ಹಾಲು ರೇಟ್‌ ಹೆಚ್ಚಳ, ಹಿಂದೆ ಎಷ್ಟಿತ್ತು? ಈಗ ಎಷ್ಟಾಗುತ್ತೆ?

ಶೇ.50ರಷ್ಟು ಸಿಬ್ಬಂದಿ ಇಲ್ಲ

ಇನ್ನು, ಪರಿಶೀಲನೆ ವೇಳೆ ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ಶೇ.50ಕ್ಕಿಂತಲು ಕಡಿಮೆ ಸಿಬ್ಬಂದಿ ಇದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಹೀಗೆ ಮುಂದುವರೆದೆರೆ ತಾಲೂಕಿನ ಕೆಲಸಗಳು ನಡೆಯುವುದು ಹೇಗೆ ಎಂದು ಪ್ರಶ್ನಿಸಿದರು. ಈ ಸಂಬಂಧ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಸಿಬ್ಬಂದಿ ಕೊರತೆ ಕುರಿತು ತಿಳಿಸಿದರು. ಅಲ್ಲದೆ ನಿಯೋಜನೆ ಮೇಲೆ ತೆರಳಿರುವ ಇಬ್ಬರು ಸಿಬ್ಬಂದಿಯನ್ನು ಕೂಡಲೆ ತೀರ್ಥಹಳ್ಳಿಗೆ ಕಳುಹಿಸುವಂತೆ ಸೂಚನೆ ನೀಡಿದರು.

Kalleshwara-Enterprises.webp

ತಾಲೂಕು ಕಚೇರಿಯ ವಿವಿಧ ಸೆಕ್ಷನ್‌ಗಳಿಗೆ ತೆರಳಿದ ಮಾಜಿ ಸಚಿವರು ಸಿಬ್ಬಂದಿ ಕೊರತೆ ಮತ್ತು ವ್ಯವಸ್ಥೆ ಕುರಿತು ಮಾಹಿತಿ ಪಡೆದರು.

Araga-Jnanendra-Sudden-Visit-to-Taluk-office-in-Thirthahalli
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment