ಶಿವಮೊಗ್ಗ ಲೈವ್.ಕಾಂ | THIRTHAHALLI | 27 ನವೆಂಬರ್ 2019
ಆಗುಂಬೆ ರಸ್ತೆಯಲ್ಲಿರುವ ಹಾರ್ಡ್ವೇರ್ ಅಂಗಡಿಯೊಂದರ ಸಮೀಪ ಬೈಕ್ನಲ್ಲಿ ಇಟ್ಟಿದ್ದ 4 ಲಕ್ಷ ರೂ. ಹಣವನ್ನು ಬೈಕ್ನಲ್ಲಿ ಬಂದ ಇಬ್ಬರು ಅಪಹರಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಮಲೆನಾಡು ಕ್ಲಬ್ನ ಮ್ಯಾನೇಜರ್ ಶರತ್ ಬ್ಯಾಂಕ್ನಿಂದ ಡ್ರಾ ಮಾಡಿ ತಂದಿದ್ದ ಹಣವನ್ನು ತಮ್ಮ ಬೈಕ್ನ ಸೈಡ್ ಬ್ಯಾಗಿನಲ್ಲಿ ಇಟ್ಟು ಹಾರ್ಡ್ವೇರ್ ಅಂಗಡಿಗೆ ಹೋಗಿದ್ದಾರೆ. ಇವರನ್ನೇ ಹಿಂಬಾಲಿಸಿಕೊಂಡು ಬೈಕ್ನಲ್ಲಿ ಬಂದಿದ್ದ ಇಬ್ಬರಲ್ಲಿ ಒಬ್ಬ ಬೈಕ್ನಿಂದ ಇಳಿದು ಹಣದ ಬ್ಯಾಗನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ. ಕಳವು ಮಾಡುತ್ತಿದ್ದ ದೃಶ್ಯ ಹಾರ್ಡ್ ವೇರ್ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಹಣ ಅರಮನೆಕೇರಿ ರವಿಶಂಕರ್ ಅವರಿಗೆ ಸೇರಿದ್ದು, ಬ್ಯಾಂಕಿನಿಂದ ಡ್ರಾ ಮಾಡಿ ತರುವಂತೆ ಶರತ್ಗೆ ಹೇಳಿದ್ದರು ಎನ್ನಲಾಗಿದೆ. ಇಂತಹ ಅಪರಾಧಗಳ ಬಗ್ಗೆ ಜಿಲ್ಲಾ ಪೊಲೀಸ್ ಅಪರಾಧ ವಿಭಾಗದವರು ಸೋಮವಾರ ಇಡೀ ದಿನ ಪಟ್ಟಣದಲ್ಲಿ ಧ್ವನಿವರ್ಧಕ ಮತ್ತು ಕರಪತ್ರ ಹಂಚುವ ಮೂಲಕ ಜನಜಾಗೃತಿ ಮೂಡಿಸಿದ್ದರು.
four lakh rupees theft by a gang in Thirthahalli Agumbe road in the city. This is the first incident after police held a drive on monday