ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 19 ನವೆಂಬರ್ 2019
ಮಂಗಗಳ ಹಾವಳಿಯಿಂದ ಮಲೆನಾಡು ಜನರು ತತ್ತರಿಸಿದ್ದಾರೆ. ಹಾಗಾಗಿ ‘ಮಂಕಿ ಪಾರ್ಕ್’ ನಿರ್ಮಾಣದ ಕೂಗು ಜೋರಾಗಿದೆ. ಈ ನಡುವೆ ತೀರ್ಥಹಳ್ಳಿಯ ಗ್ರಾಮವೊಂದರಲ್ಲಿ ಮಂಗಗಳನ್ನು ಹಿಡಿದು ಬೋನ್ ತಂದು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಇಡಲಾಗಿತ್ತು. ಇದರ ವಿಡಿಯೋ ವೈರಲ್ ಆಗಿದೆ.
ಮಂಗಗಳನ್ನು ಹಿಡಿದಿದ್ದು ಎಲ್ಲಿ?
ತೀರ್ಥಹಳ್ಳಿ ತಾಲೂಕಿನಲ್ಲಿ ಅರಳ ಸುರಳಿ ಗ್ರಾಮದಲ್ಲಿ ಮಂಗಗಳನ್ನು ಹಿಡಿಯಲಾಗಿದೆ. ಸುಮಾರು 150 ಮಂಗಗಳನ್ನು ಹಿಡಿದು, ಕಬ್ಬಿಣದ ಬಾಕ್ಸ್’ನಲ್ಲಿ ತಂದು ಗ್ರಾಮ ಪಂಚಾಯಿತಿ ಕಟ್ಟಡದ ಮುಂದೆ ಇರಿಸಲಾಗಿತ್ತು.
ಮಂಗಗಳನ್ನು ಹಿಡಿದಿದ್ದು ಯಾರು?
ಮಂಗಗಳು ಬೆಳೆ ಹಾನಿ ಮಾಡುತ್ತಿವೆ. ಮನೆಗಳಿಗು ನುಗ್ಗುತ್ತಿವೆ. ಇದರಿಂದ ಮಲೆನಾಡು ಭಾಗದ ಹಲವು ಗ್ರಾಮಗಳು ತತ್ತರಿಸಿವೆ. ಈ ನಡುವೆ ಕೆಲವರು ಮಂಗಗಳನ್ನು ಹಿಡಿಯುವುದಾಗಿ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಲವು ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ತಂಡಕ್ಕೆ 10 ಸಾವಿರ ರೂ. ನೀಡಿದರೆ ಮಂಗಗಳನ್ನು ಹಿಡಿಯುವುದಾಗಿ ತಿಳಿಸಿದ್ದಾರೆ. ಅರಳ ಸುರಳಿ ಗ್ರಾಮಸ್ಥರಿಂದಲು ಈ ತಂಡ ಹತ್ತು ಸಾವಿರ ರೂ. ಪಡೆದಿದೆ.
ಮಂಗಗಳನ್ನು ಹೇಗೆ ಹಿಡಿಯುತ್ತಾರೆ?
ಕಬ್ಬಿಣದ ಬೋಣ್ ಬಳಸಿ ಮಂಗಗಳನ್ನು ಹಿಡಿಯಲಾಗುತ್ತಿದೆ. ಬೋನ್ ಒಳಗೆ ಬಾಳೆ ಹಣ್ಣು ಅಥವಾ ಮಂಗಗಳಿಗೆ ಇಷ್ಟವಾಗುವ ತಿನಿಸುಗಳನ್ನು ಇರಿಸಿ, ಅವು ಬೋನ್’ನ ಒಳ ಬರುತ್ತಿದ್ದಂತೆ ಬಂದ್ ಮಾಡಲಾಗುತ್ತದೆ. ‘ಈ ತಂಡದಲ್ಲಿ ಐದರಿಂದ ಆರು ಜನರಿದ್ದಾರೆ. ಮಂಗಗಳನ್ನು ಪ್ರೊಫೆಷನಲ್ ಆಗಿ ಹಿಡಿಯುತ್ತಿದ್ದಾರೆ. ಮಂಗಗಳ ಒಂದು ಗುಂಪನ್ನು ಮಾತ್ರ ಹಿಡಿಯುತ್ತಾರೆ’ ಎಂದು ಅರಳ ಸುರುಳಿ ಗ್ರಾಮದ ವಿಶ್ವಾಸ್ ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಬಿಟ್ಟಿದ್ದೇಕೆ?
‘ಮಂಗಗಳನ್ನು ಹಿಡಿಯಲು ಬಯಲುಸೀಮೆ ಕಡೆಯಿಂದ ಒಂದು ತಂಡ ಬಂದಿದೆ. ಮೂರ್ನಾಲ್ಕು ದಿನದಿಂದ ಇವರು ಕಾರ್ಯಾಚರಣೆ ಮಾಡಿದ್ದರು’ ಎಂದು ಗ್ರಾಮದ ಮಂಜುನಾಥ್ ಹೇಳಿದರು. 10 ಸಾವಿರ ರೂ. ಹಣ ಪಡೆದಿದ್ದ ತಂಡ, ಕೊನೆಗೆ ಹಿಡಿದ ಮಂಗಗಳನ್ನು ಗ್ರಾಮಸ್ಥರಿಗೆ ಒಪ್ಪಿಸಿದೆ. ಆದರೆ ಹಿಡಿದ ಮಂಗಗಳನ್ನು ಮುಂದೇನು ಮಾಡಬೇಕು ಎಂದು ತಿಳಿದಾದಾಗ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಇರಿಸಲಾಯಿತು.
ವಿಡಿಯೋ ವೈರಲ್, ಅರಣ್ಯಾಧಿಕಾರಿಗಳು ದೌಡು
ಬೋನ್’ನಲ್ಲಿ ಮಂಗಗಳನ್ನು ಸೆರೆ ಹಿಡಿದಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ, ಅರಣ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದಾರೆ. ಮಂಗಗಳನ್ನ ಪರಿಶೀಲನೆ ನಡೆಸಿದರು. ಬಳಿಕ ಅವುಗಳನ್ನು ಕೊಂಡೊಯ್ದು ಆಗುಂಬೆ ಕಾಡಿನಲ್ಲಿ ಬಿಡಲಾಯಿತು.
ಜಿಲ್ಲೆಯಾದ್ಯಂತ ಮಂಗಗಳ ಹಾವಳಿಯಿಂದಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಇದೇ ಕಾರಣಕ್ಕೆ ಮಂಕಿ ಪರ್ಕ್ ನಿರ್ಮಿಸುವಂತೆ ಒತ್ತಾಯ ಹೆಚ್ಚಾಗಿದೆ. ಮತ್ತೊಂದೆಡೆ ಸರ್ಕಾರ ಮಂಕಿ ಪಾರ್ಕ್ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದು, ನಿಟ್ಟೂರು ಬಳಿ ಪಾರ್ಕ್ ನಿರ್ಮಾಣ ಸಾದ್ಯತೆ ಇದೆ. ಈ ನಡುವೆ ಅರಳ ಸುರುಳಿ ಗ್ರಾಮದಲ್ಲಿ ಮಂಗಗಳನ್ನು ಹಿಡಿದಿದ್ದು, ಹಲವರು ಕುತೂಹಲಕ್ಕೆ ಕಾರಣವಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422