SHIVAMOGGA LIVE NEWS
THIRTHAHALLI | ತನ್ನ ಮಗನದ್ದು ಸಹಜ ಸಾವಲ್ಲ. ಯಾರೋ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಶವದ ಮೇಲೆ ಬಾಸುಂಡೆಯ ಗುರುತುಗಳಿದ್ದವು. ಇದು ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗಸಾಡಿ ಗ್ರಾಮದ ರಮೇಶನ ಸಾವಿನ ಕುರಿತು ಆತನ ಕುಟುಂಬದವರು ಅಳಲು. (murder suspect)
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ರಮೇಶ್ ಮನೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ವೇಳೆ, ರಮೇಶನ ಸಾವಿನ ಕುರಿತು ಕುಟುಂಬದವರು ಅನುಮಾನ ವ್ಯಕ್ತಪಡಿಸಿದರು.
(murder suspect)
ರಮೇಶನದ್ದು ಸಹಜ ಸಾವಲ್ಲ. ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಮೃತದೇಹದ ಮೇಲೆ ಬಾಸುಂಡೆಗಳಿದ್ದವು. ನೆತ್ತಿ, ಬಲಗೆನ್ನೆ, ಪಕ್ಕೆಲುಬು ಮತ್ತು ಕಾಲಿನ ಮೇಲೆ ಗಾಯಗಳಿದ್ದವು. ರಮೇಶನಿಗೆ ಮದ್ಯಪಾನ ಮಾಡುವ ಅಭ್ಯಾಸವಿತ್ತು. ಆದರೆ ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ. ಮದ್ಯ ಸೇವಿಸಿದ ಜಾಗದಲ್ಲಿ ಏನೋ ಗಲಾಟೆಯಾಗಿ ಯಾರೊ ಹಲ್ಲೆ ಮಾಡಿ, ಜಮೀನಿನ ಪಕ್ಕದಲ್ಲಿ ತಂದು ಮಲಗಿಸಿದಂತಿತ್ತು ಎಂದು ರಮೇಶನ ತಾಯಿ ಪಾರ್ವತಮ್ಮ, ಸಹೋದರ ಲೋಕೇಶ್ ಮತ್ತು ಚಿಕ್ಕಮ್ಮ ಆರೋಪಿಸಿದರು. (murder suspect)
ಶವ ಪರೀಕ್ಷೆ ಬಳಿಕ ಅನುಮಾನ ಬಂದರೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ ಈತನಕ ಯಾವುದೆ ಕ್ರಮ ಕೈಗೊಂಡಿಲ್ಲ. ಕೋರ್ಟಿಗೆ ಓಡಾಡುವಷ್ಟು ಶಕ್ತಿ ತಮಗಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಎದುರು ಅಳಲು ತೋಡಿಕೊಂಡರು.
ಕ್ಲಿಕ್ ಮಾಡಿ ಇದನ್ನೂ ಓದಿ | ‘ನಿಮ್ಮ ಸರ್ವನಾಶಕ್ಕೆ ನೀವೆ ಕಾರಣ’, ಪ್ರತಿಜ್ಞೆಯಾಗಿ ವಾರಕ್ಕೆ ವ್ಯಕ್ತಿ ಸಾವು, ಗ್ರಾಮದಲ್ಲಿ ಆಕ್ರೋಶ
ಈ ವೇಳೆ ಮಾತನಾಡಿದ ಕಿಮ್ಮನೆ ರತ್ನಾಕರ್ ಅವರು, ರಮೇಶ್ ಸಾವಿನ ಕುರಿತು ಅನುಮಾನಗಳು ವ್ಯಕ್ತವಾಗುತ್ತಿವೆ. ಸೂಕ್ತ ತನಿಖೆ ನಡೆಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದರು.
ಅ.17ರಂದು ಗ್ರಾಮ ರಮೇಶ್ ಎಂಬಾತ ತೀವ್ರ ಅಸ್ವಸ್ಥಗೊಂಡ ಸ್ಥತಿಯಲ್ಲಿ ಗದ್ದೆ ಬದಿಯಲ್ಲಿ ಪತ್ತೆಯಾಗಿದ್ದ. ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಕೊನೆಯುಸಿರೆಳೆದಿದ್ದ. ರಮೇಶನ ಸಾವಿಗೆ ಅಕ್ರಮ ಮದ್ಯ ಕಾರಣ ಎಂದು ಆರೋಪಿಸಲಾಗಿತ್ತು. ಆದರೆ ಗ್ರಾಮಸ್ಥರು ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿದ್ದರು.
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.