ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 15 ಜನವರಿ 2020
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಬೆಂಗಳೂರು- ತಾಳಗುಪ್ಪ ಎಕ್ಸ್’ಪ್ರೆಸ್ ರೈಲಿಗೆ ಕೆಳದಿ ರಾಣಿ ಚನ್ನಮ್ಮಾಜಿ ಎಕ್ಸ್’ಪ್ರೆಸ್ ಎಂದು ಹೆಸರಿಡಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಕೋಣಂದೂರು ಶಿವಲಿಂಗೇಶ್ವರ ಬೃಹನ್ಮಠದಲ್ಲಿ ಧನುರ್ಮಾಸದ ಶಿವಪೂಜಾ ಅನುಷ್ಠಾನ ಮುಕ್ತಾಯ, ಶಿವಲಿಂಗಶ್ರೀ ಪ್ರಶಸ್ತಿ ಪ್ರದಾನ ಮತ್ತು ಶಾಶ್ವತ ಮುತ್ತೈದೆತನಕ್ಕಾಗಿ ಭಕ್ತ ದಂಪತಿಗಳಿಂದ ಮಾಂಗಲ್ಯ ಧರ್ಮವೇ ಪೂಜೆ ಹಾಗೂ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಮಲೆನಾಡಿನ 5 ಜಿಲ್ಲೆಗಳಲ್ಲಿ ನೂರಾರು ವರ್ಷ ಆಳ್ವಿಕೆ ಮಾಡಿದ ಕೆಳದಿ ರಾಜವಂಶದ ಹೆಸರಾಂತ ರಾಣಿ ಚನ್ನಮ್ಮನ ಹೆಸರನ್ನು ರೈಲಿಗೆ ಇಡುವಂತೆ ಈಗಾಗಲೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.
ವೀರಶೈವ ಎಂಬುದು ಧರ್ಮವೇ ವಿನಃ ಅದು ಜಾತಿಯಲ್ಲ. ವೀರಶೈವ ಮಠಗಳು ಅನಾದಿ ಕಾಲದಿಂದಲೂ ಧರ್ಮಾಚರಣೆ, ಸಂಸ್ಕೃತಿ, ಶಿಕ್ಷಣ, ಕಾಯಕ, ದಾಸೋಹ ಕಾರ್ಯಗಳನ್ನು ನಿರಂತರ ನಡೆಸಿಕೊಂಡು ಬರುತ್ತಿವೆ. ಇಂದಿನ ಸರ್ಕಾರಗಳು ಇಂತಹ ಕಾರ್ಯಕ್ರಮಗಳನ್ನೇ ಮುಂದುವರಿಸುತ್ತಿವೆ ಎಂದು ಹೇಳಿದರು.
ಕವಲೆದುರ್ಗ ಮಠದ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಗೆ 2020ನೇ ಸಾಲಿನ ಶಿವಲಿಂಗ ಶ್ರೀ ಪ್ರಶಸ್ತಿ ನೀಡಲಾಯಿತು. ಹೊನ್ನಾಳಿ ಹಿರೇಕಲ್ಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಕೋಣಂದೂರು ಮಠದ ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ, ರಟ್ಟೆಹಳ್ಳಿ ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ತೊಗರ್ಸಿ ಶ್ರೀ ಮಹಂತ ದೇಶಿಕೇಂದ್ರ ಸ್ವಾಮೀಜಿ, ಜಡೆಮಠದ ಡಾ. ಮಹಂತ ಸ್ವಾಮೀಜಿ, ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಜಡೆ ಹಿರೇಮಠದ ಶ್ರೀ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ಹಿರೇಮಠದ ಶ್ರೀ ಕೇದಾರ ಶಾಂತಲಿಂಗ ಸ್ವಾಮೀಜಿ ಇದ್ದರು.
ಶಾಸಕ ಆರಗ ಜ್ಞಾನೇಂದ್ರ, ಜಿಪಂ ಸದಸ್ಯರಾದ ಶರಧಿ ಪೂರ್ಣೇಶ, ಕಲಗೋಡು ರತ್ನಾಕರ, ಪ್ರಶಾಂತ ರಿಪ್ಪನ್ಪೇಟೆ, ಆಲುವಳ್ಳಿ ವೀರೇಶ, ಮಂಜುನಾಥ, ಚಂದ್ರಮೌಳಿ, ಮಲ್ಲಿಕಾರ್ಜುನ ಹಕ್ರೆ, ಕೋಣಂದೂರು ಪಕಾಶ, ಸಿ.ಬಿ.ಈಶ್ವರ, ಈಶ್ವರಪ್ಪ ಹಾರೋಹಿತ್ತಲು ಇದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]