ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ತೀರ್ಥಹಳ್ಳಿ: ಕುಟುಂಬದೊಂದಿಗೆ ನವದಂಪತಿ ದೇವಸ್ಥಾನಕ್ಕೆ ತೆರಳುತ್ತಿದ್ದ ಕಾರಿಗೆ ಎದುರಿನಿಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ನವವಧು (Newlywed) ಸೇರಿ ಮೂವರು ಮಹಿಳೆಯರು ಗಾಯಗೊಂಡಿದ್ದಾರೆ.
ತೀರ್ಥಹಳ್ಳಿ ತಾಲೂಕು ಆಗುಂಬೆ ಸಮೀಪದ ಅರೇಕಲ್ ಕ್ರಾಸ್ ಬಳಿ ಘಟನೆ ಸಂಭವಿಸಿದೆ. ನವವಧು ನಾಗರತ್ನ, ಅವರ ತಾಯಿ ಗೀತಾ, ಅಜ್ಜಿ ರಾಧಮ್ಮ ಗಾಯಗೊಂಡಿದ್ದಾರೆ.

ಎದುರಿನಿಂದ ಬಂದ ಕಾರು ಡಿಕ್ಕಿ
ನಗರತ್ನ ಮತ್ತು ಸುಬ್ರಹ್ಮಣ್ಯ ಅವರು ಈಚಗೆ ವಿವಾಹವಾಗಿದ್ದು (Newlywed), ಕುಟುಂಬದವರ ಜೊತೆಗೆ ಮಂದಾರ್ತಿಗೆ ತೆರಳುತ್ತಿದ್ದರು. ಸುಬ್ರಹ್ಮಣ್ಯ ಅವರು ಕಾರು ಚಲಾಯಿಸುತ್ತಿದ್ದರು. ಮೇಘರವಳ್ಳಿ ಸಮೀಪ ಅರೇಕಲ್ ಕ್ರಾಸ್ ಸಮೀಪ ಎದುರಿನಿಂದ ಬಂದ ರಿಟ್ಜ್ ಕಾರು, ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ.

ಘಟನೆ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ » ವಿಶ್ವದಲ್ಲೆ ಮೊದಲ ಬಾರಿ, ಶಿವಮೊಗ್ಗದಲ್ಲಿ 1404 ಮಂದಿಯಿಂದ ವಚನ ಗಾಯನ, ಹೇಗಿತ್ತು? ಇಲ್ಲಿದೆ ಫೋಟೊ ಆಲ್ಬಂ

LATEST NEWS
- ಶಿವಮೊಗ್ಗದಲ್ಲಿ ಬಂಜಾರ ಮುಖಂಡರು ಪೊಲೀಸ್ ವಶಕ್ಕೆ, ಸಭೀಕರಿಲ್ಲದೆ ನಡೆಯಿತು ಸೇವಾಲಾಲ್ ಜಯಂತಿ

- ಶಿವಮೊಗ್ಗದಲ್ಲಿ ಕೆಎಎಸ್ ಅಧಿಕಾರಿ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ, ಆಗಿದ್ದೇನು?

- ಬಿಳಕಿಯಲ್ಲಿ ಅಂಗನವಾಡಿ ಸಹಾಯಕಿ ಮೃತದೇಹ ಪತ್ತೆ

- ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಹತ್ಯೆ, ಸ್ಥಳಕ್ಕೆ ತುಂಗಾ ನಗರ ಪೊಲೀಸರು ದೌಡು

- ಭದ್ರಾವತಿ ವ್ಯಕ್ತಿಗೆ 2 ವರ್ಷ ಜೈಲು, ₹10,000 ದಂಡ, ಕಾರಣ ಹೂವಿನ ಗಿಡ

About The Editor
ನಿತಿನ್ ಆರ್.ಕೈದೊಟ್ಲು






