ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 18 MAY 2023
THIRTHAHALLI : ಸಮುದಾಯ ಭವನದಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ (ARREST). ಬಂಧಿತನನ್ನು ರಾಜಣ್ಣ (58) ಎಂದು ಗುರುತಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ತೀರ್ಥಹಳ್ಳಿಯ ಕುರುವಳ್ಳಿ ಸಮೀಪ ನಿರ್ಮಾಣ ಹಂತದ ವಿಶ್ವಕರ್ಮ ಸಮುದಾಯ ಭವನದಲ್ಲಿ ಜೋಡಿ ಕೊಲೆಯಾಗಿತ್ತು. ಮೃತರನ್ನು ಆರ್.ಬೀರೇಶ್ (35) ಮತ್ತು ಮಂಜ (46) ಎಂದು ಗುರುತಿಸಲಾಗಿದೆ.
ಸಮುದಾಯ ಭವನ ನಿರ್ಮಾಣ ಕಾರ್ಯದಲ್ಲಿ ಮೂವರು ಕೆಲಸಗಾರರಾಗಿದ್ದರು. ಕಳೆದ ರಾತ್ರಿ ಮೂವರ ಮಧ್ಯೆ ಜಗಳವಾಗಿದ್ದು, ರಾಜಣ್ಣ, ಇಬ್ಬರನ್ನು ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. (ARREST)
ಇನ್ನು, ಜೋಡಿ ಕೊಲೆಯ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತೀರ್ಥಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ – ಪೊಲೀಸರಿಂದ ದಿಢೀರ್ ವಿಶೇಷ ಗಸ್ತು, ಅನುಮಾನಾಸ್ಪದ 11 ಮಂದಿ ಠಾಣೆಗೆ
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ