ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
THIRTAHALLI NEWS, 27 OCTOBER 2024 : ತೀವ್ರ ಅಸ್ವಸ್ಥಗೊಂಡು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ವಾರಸುದಾರರ (Heirs) ಪತ್ತೆಗೆ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಒಬ್ಬರ ಮನೆಯಲ್ಲಿ ಕಳೆದ 5 ತಿಂಗಳಿಂದ ಕೆಲಸ ಮಾಡುತ್ತಿದ್ದ ರಮೇಶ್‌ಗೆ ಅತಿಯಾದ ಮದ್ಯ ಸೇವಿಸುವ ಅಭ್ಯಾಸವಿತ್ತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮದ್ಯ ಸೇವಿಸಿ ಎಲ್ಲೆಂದರಲ್ಲಿ ಬಿದ್ದು ಹೊರಳಾಡುತ್ತಿದ್ದರು. ಅ.24ರಂದು ಬೆಳಗ್ಗೆ ಅಸ್ವಸ್ಥಗೊಂಡಿದ್ದ ರಮೇಶ್‌ನನ್ನು ತೀರ್ಥಹಳ್ಳಿ ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ವೈದ್ಯರು ರಮೇಶ್ ಮೃತಪಟ್ಟಿರುವುದಾಗಿ ತಿಳಿಸಿದ್ದರು. ರಮೇಶ್‌ನ ವಾರಸುದಾರರು ಗೊತ್ತಿಲ್ಲದ ಹಿನ್ನೆಲೆ ಅವರ ಪತ್ತೆಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಇದನ್ನೂ ಓದಿ » ಅಡಿಕೆ ಧಾರಣೆ | ಈ ವಾರ ಶಿವಮೊಗ್ಗದಲ್ಲಿ ಯಾವ್ಯಾವ ಅಡಿಕೆಗೆ ಎಷ್ಟಿತ್ತು ರೇಟ್?
45 ವರ್ಷದ ರಮೇಶ್ ಎಣ್ಣೆ ಗೆಂಪು ಮೈ ಬಣ್ಣ, ಕೋಲು ಮುಖ, ತೆಳ್ಳನೆ ಮೈಕಟ್ಟು ಹೊಂದಿದ್ದಾರೆ. ಕನ್ನಡ, ತಮಿಳು ಮತ್ತು ತುಳು ಭಾಷೆ ಮಾತನಾಡುತ್ತಿದ್ದರು. ಎದೆ ಮೇಲೆ ಜ್ಯೋತಿ ಎಂಬ ಹಚ್ಚೆ ಇದೆ. ಹೊಟ್ಟೆ ಮೇಲೆ ಕಪ್ಪು ಮಚ್ಚೆ ಇದೆ. ವಾರಸುದಾರರು ಇದ್ದಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆ ಅಥವಾ 08181228333 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.