ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಗೆ ಸಿದ್ಧತೆ ಜೋರು, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

 ಶಿವಮೊಗ್ಗ  LIVE 

ತೀರ್ಥಹಳ್ಳಿ: ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆ (Ellamavasya Jatre) ಡಿ.17 ರಿಂದ 22ರವರೆಗೆ ₹25 ಲಕ್ಷ ವೆಚ್ಚದಲ್ಲಿ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆಯ ಗೌರವಾಧ್ಯಕ್ಷ, ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಇದನ್ನೂ ಓದಿ » ಡೆವಿಲ್‌ ಸಿನಿಮಾ ಸಂಭ್ರಮಾಚರಣೆ ಮುಗಿಸಿ ತೆರಳುವಾಗ ಅಪಘಾತ, ಯುವಕ ಸಾವು

Sigandur-Janthre-2026-scaled.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರಗ ಜ್ಞಾನೇಂದ್ರ, ಡಿ.17 ರಂದು ಗಣಪತಿ ಪೂಜೆ, ಧ್ವಜಾರೋಹಣ, 18ರಂದು ಪುರೋತ್ಸವ, 19ರಂದು ಪರಶುರಾಮ ತೀರ್ಥಪೂಜೆ, ತೀರ್ಥಾಭಿಷೇಕ ಮತ್ತು ತೀರ್ಥಸ್ನಾನ ನಡೆಯಲಿದೆ. ಸಂಜೆ ಉದಯ ಕುಮಾರ್‌ ಶೆಟ್ಟಿ ತಂಡದಿಂದ ನೃತ್ಯ ವೈಭವ ಹಮ್ಮಿಕೊಳ್ಳಲಾಗಿದೆ ಎಂದರು.

Thirthahalli-Bridge-and-araga-jnanendra.

ಡಿ.20ರಂದು ಮನ್ಮಹಾರಥಾರೋಹಣ, ಸಂಜೆ ಆರ್.ಜಿ. ಫಿಟೈಸ್ ಕ್ಲಬ್ ವತಿಯಿಂದ ದೇಹದಾರ್ಢ ಸ್ಪರ್ಧೆ, 21ರ ಸಂಜೆ ನಿಶಾ ಸ್ಪೋರ್ಟ್ಸ್ ಕ್ಲಬ್‌ನಿಂದ ತುಂಗಾ ನದಿಯ ದಡದ ಮರಳು ಗುಡ್ಡೆಯ ಮೇಲೆ ವಾಲಿಬಾಲ್ ಪಂದ್ಯಾವಳಿ, ನಂತರ ರಾಮಚಂದ್ರ ಹಡಪದ ತಂಡದಿಂದ ಸಂಗೀತ ಸಂಜೆ, ತುಂಗಾ ನದಿಯಲ್ಲಿ ಸಿಡಿ ಮದ್ದು ಪ್ರದರ್ಶನದೊಂದಿಗೆ ತೆಪ್ಪೋತ್ಸವ ನಡೆಯಲಿದೆ ಎಂದು ತಿಳಿಸಿದರು.

ಎಳ್ಳಮಾವಾಸ್ಯೆ ಜಾತ್ರೆಯ ಅಂಗವಾಗಿ ಸುಮಾರು 50 ಅಡಿ ಎತ್ತರದ ಪರಶುರಾಮನ ಮೂರ್ತಿಯನ್ನು ತುಂಗಾ ನದಿ ತೀರದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ.ಸೊಪ್ಪುಗುಡ್ಡೆ ರಾಘವೇಂದ್ರ, ಜಾತ್ರೆ ಸಂಚಾಲಕ

ಈಗಾಗಲೇ ಪಟ್ಟಣ ಪಂಚಾಯಿತಿ ವತಿಯಿಂದ ಸ್ವಚ್ಚತೆಯನ್ನು ಮಾಡಲಾಗಿದೆ. ಸಮಿತಿ ಆರ್ಥಿಕ ಸಹಕಾರ ನೀಡುತ್ತಿದೆ. ಕಾಶಿ ದೀಕ್ಷಿತ್ ಅವರಿಂದ ತುಂಗಾರತಿ ನಡೆಯಲಿದೆ. ಜಾತ್ರೆ ಸಂದರ್ಭ 7 ದಿನ ಅನ್ನದಾಸೋಹ ನಡೆಯಲಿದೆ ಎಂದುಟಿ.ಎಲ್.ಸುಂದರೇಶ್, ಸಹ ಸಂಚಾಲಕ

ಪತ್ರಿಕಾಗೋಷ್ಠಿಯಲ್ಲಿ ಬಿ.ಆರ್.ರಾಘವೇಂದ್ರ ಶೆಟ್ಟಿ, ಪಾಂಡುರಂಗಪ್ಪ, ಗೀತಾ ರಮೇಶ್, ಜಯಪ್ರಕಾಶ್ ಶೆಟ್ಟಿ, ರತ್ನಾಕರ ಶೆಟ್ಟಿ, ಟಿ.ಜೆ.ಅನಿಲ್, ವರಲಕ್ಷ್ಮಿ, ಜ್ಯೋತಿ, ಸುರಭಿ ಕಿಶೋರ್, ನಯನ, ಅಮರನಾಥ ಶೆಟ್ಟಿ ಇದ್ದರು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment