ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | THIRTHAHALLI | 8 ಜುಲೈ 2022
ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದ ಬೇಸತ್ತು, ಗ್ರಾಮಸ್ಥರೆ ಟಾರ್ಪಲ್ ಹೊದಿಕೆಯ ಬಸ್ ನಿಲ್ದಾಣ ನಿರ್ಮಿಸಿಕೊಂಡಿದ್ದಾರೆ. ಮಳೆಗಾಲದಲ್ಲಿ ಮಕ್ಕಳು, ಹಿರಿಯರು ಮಳೆಯಲ್ಲಿ ನಿಂತು ಬಸ್ಸಿಗೆ ಕಾಯುವುದನ್ನು ತಪ್ಪಿಸಲು ಈ ಕ್ರಮ ಕೈಗೊಂಡಿದ್ದಾರೆ.
ತೀರ್ಥಹಳ್ಳಿ ತಾಲೂಕು ಕನ್ನಂಗಿ (KANNANGI) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವತ್ತಿ (YEDAVATTI) ಗ್ರಾಮದ ಜನರು, ಟಾರ್ಪಲ್ ಹೊದಿಕೆಯ ಬಸ್ ನಿಲ್ದಾಣ ನಿರ್ಮಿಸಿಕೊಂಡಿದ್ದಾರೆ.
ಬಸ್ ನಿಲ್ದಾಣ ನಿರ್ಮಿಸಿಕೊಡಲು ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದೆ. ಈ ಹಿನ್ನೆಲೆ ಗ್ರಾಮಸ್ಥರೆ ಟಾರ್ಪಲ್ ಹೊದಿಕೆ ಟೆಂಟ್ ಮಾದರಿಯ ಬಸ್ ನಿಲ್ದಾಣ ನಿರ್ಮಿಸಿದ್ದಾರೆ. ಶಾಲೆ, ಕಾಲೇಜಿಗೆ ತೆರಳುವ ಮಕ್ಕಳು, ಗ್ರಾಮಸ್ಥರು, ಹಿರಿಯರಿಗೆ ಈ ಟಾರ್ಪಲ್ ಹೊದಿಕೆ ಬಸ್ ನಿಲ್ದಾನವೆ ಸದ್ಯಕ್ಕೆ ತಂಗುದಾಣವಾಗಿದೆ.
ಕಾಂಕ್ರಿಟ್ ನಿಲ್ದಾಣಕ್ಕೆ ಕಾರು ಡಿಕ್ಕಿ
ಹಣಗೆರೆ, ಕನ್ನಂಗಿ, ಕುಡುವಳ್ಳಿ, ಸೀಕೆ, ಸೀಕೆ ರೋಡ್ ಸಂಪರ್ಕದ ರಸ್ತೆಯಲ್ಲಿ ಯಡವತ್ತಿ ಗ್ರಾಮವಿದೆ. 30 ವರ್ಷದ ಹಿಂದೆ ಇಲ್ಲಿ ಅಚ್ಚುಕಟ್ಟಾದ ಕಾಂಕ್ರಿಟ್ ತುಂಗುದಾಣ ನಿರ್ಮಿಸಲಾಗಿತ್ತು. ಯಡವತ್ತಿ, ಕರಿಮನೆ, ಹುಯಿಗೆ ಹಕ್ಕಲು ಸೇರಿದಂತೆ ಅನೇಕ ಮಜಿರೆ ಗ್ರಾಮದ ಜನರು ಈ ತಂಗುದಾಣವನ್ನು ಬಳಕೆ ಮಾಡಿಕೊಳ್ಳುತ್ತಿದ್ದರು.
ಯಡವತ್ತಿ ಗ್ರಾಮದ ಬಳಿ ತಿರುವು ಇದೆ. ಈ ತಿರುವಿನಲ್ಲೆ ಬಸ್ ತಂಗುದಾಣವಿತ್ತು. ಕಾರೊಂದು ಬಸ್ ತಂಗುದಾಣಕ್ಕೆ ಡಿಕ್ಕಿ ಹೊಡೆದು, ಸಂಪೂರ್ಣ ಹಾನಿಯಾಗಿತ್ತು. ಹಾಗಾಗಿ ಹೊಸ ತಂಗುದಾಣ ನಿರ್ಮಿಸಿ ಕೊಡುವಂತೆ ಗ್ರಾಮಸ್ಥರು ಗ್ರಾಮ ಪಂಚಾಯಿತಿಯನ್ನು ಒತ್ತಾಯಿಸಿದ್ದರು.
ಅನುದಾನದ ಕೊರತೆ
ಮುರಿದು ಬಿದ್ದ ಬಸ್ ನಿಲ್ದಾಣದ ಸಾಮಗ್ರಿಗಳನ್ನು ಕನ್ನಂಗಿ ಗ್ರಾಮ ಪಂಚಾಯಿತಿ ವತಿಯಿಂದ ಹರಾಜು ಹಾಕಲಾಯಿತು. ಹರಾಜು ಹಾಕಲು ಉತ್ಸಾಹ ತೋರಿದ ಗ್ರಾಮ ಪಂಚಾಯಿತಿ, ಹೊಸ ನಿಲ್ದಾಣ ನಿರ್ಮಾಣದ ಬಗ್ಗೆ ಗಮನ ಕೊಡಲಿಲ್ಲ. ಗ್ರಾಮಸ್ಥರು ಪದೇ ಪದೆ ಮನವಿ ಮಾಡಿದಾಗ, ಅನುದಾನ ಕೊರತೆಯ ಸಬೂಬು ಹೇಳಿ ಕೇಳುಹಿಸಲಾಯಿತು.
ಮಕ್ಕಳು, ಹಿರಿಯರು ಮತ್ತು ಮಳೆ
ತೀರ್ಥಹಳ್ಳಿ ತಾಲೂಕಿನಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಶಾಲೆ, ಕಾಲೇಜು ವಿದ್ಯಾರ್ಥಿಗಳು, ಬಸ್ಸಿಗಾಗಿ ಕಾಯುವ ಗ್ರಾಮಸ್ಥರು ಮಳೆಯಲ್ಲಿ ನೆನೆಯುತ್ತಲೆ ಬಸ್ಸಿಗಾಗಿ ಕಾಯಬೇಕಾಗುತ್ತಿತ್ತು. ‘ಹಸಿಯಾದ ಕೊಡೆಯನ್ನು ಮಕ್ಕಳು ಬ್ಯಾಗಿನಲ್ಲಿ ಇಟ್ಟುಕೊಳ್ಳುವುದು ಕಷ್ಟ. ಬಸ್ಸಿನಲ್ಲಿ ಲಗೇಜ್ ಇಡುವ ಜಾಗದಲ್ಲಿ ಹಸಿಯಾದ ಕೊಡೆ ಇಡಲು ಬಿಡುವುದಿಲ್ಲ. ಮಕ್ಕಳು ಬಹಳ ಕಷ್ಟ ಪಡುತ್ತಿದ್ದರು. ದೊಡ್ಡವರಿಗೂ ಇದೆ ಸಮಸ್ಯೆ ಆಗುತ್ತಿತ್ತು’ ಅನ್ನುತ್ತಾರೆ ಯಡವತ್ತಿಯ ರಂಗನಾಥ್.
ಟಾರ್ಪಲ್ ತಂಗುದಾಣ ನಿರ್ಮಾಣ
ಕನ್ನಂಗಿ ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದ ಬೆಸತ್ತು, ಗ್ರಾಮಸ್ಥರು ತಾತ್ಕಲಿಕ ತಂಗುದಾಣ ನಿರ್ಮಿಸಿದರು. ಟಾರ್ಪಲ್ ಬಳಸಿ, ಟೆಂಟ್ ಮಾದರಿಯಲ್ಲಿ ತಂಗುದಾಣ ನಿರ್ಮಿಸಿದ್ದಾರೆ. ಮಳೆ, ಬಿಸಿಲಿನಿಂದ ಈ ಟಾರ್ಪಲ್ ತಂಗುದಾಣ ರಕ್ಷಣೆ ನೀಡಲಿದೆ. ‘ಯಾರನ್ನೋ ವಿರೋಧಿಸಲು, ಯಾರಿಂದಲೋ ಬೆಸತ್ತು ಟಾರ್ಪಲ್ ಕಟ್ಟಿದ್ದಲ್ಲ. ನಮ್ಮ ಮಕ್ಕಳು, ನಮ್ಮೂರಿನ ಜನ ಮುಖ್ಯ. ಹಾಗಾಗಿ ನಾವೇ ತಂಗುದಾಣ ನಿರ್ಮಿಸಿಕೊಂಡಿದ್ದೇವೆ. ಇದು ಯಾವುದೆ ರೀತಿಯ ಪ್ರತಿಭಟನೆಯಲ್ಲ’ ಎಂದು ಯಡವತ್ತಿಯ ರಂಗನಾಥ್ ತಿಳಿಸಿದ್ದಾರೆ.
ಹಳ್ಳಿ ಹಳ್ಳಿಯ ಅಭಿವೃದ್ಧಿ ಮಾಡಿದ್ದೇವೆ ಎಂದು ರಾಜಕಾರಣಿಗಳು ನಿತ್ಯ ಭಾಷಣ ಮಾಡುತ್ತಾರೆ. ಆದರೆ ಅನುದಾನ ಕೊರತೆಯಿಂದ ಗ್ರಾಮೀಣ ಪ್ರದೇಶ ಮೂಲ ಸೌಕರ್ಯಗಳಿಂದಲೆ ವಂಚಿತವಾಗುತ್ತಿದೆ. ಇದಕ್ಕೆ ಯಡವತ್ತಿನ ಗ್ರಾಮದ ಬಸ್ ತಂಗುದಾಣವೆ ಉದಾಹರಣೆ.
ಇದನ್ನೂ ಓದಿ – ಮಂಡಗದ್ದೆ ಬಳಿ ಚಂದ್ರಶೇಖರ ಗುರೂಜಿ ಹೆಂಡತಿ ಮನೆಯಲ್ಲಿ ನೀರವ ಮೌನ
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422