ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | THIRTHAHALLI | 29 ಡಿಸೆಂಬರ್ 2019
ತೀರ್ಥಹಳ್ಳಿಯ ತುಂಗಾ ನದಿ ದಂಡೆ ಮೇಲೆ ಎಳ್ಳಮವಾಸ್ಯೆಯ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿತು. ಬಾನಂಗಳದಲ್ಲಿ ಸಿಡಿಮದ್ದುಗಳ ಆಕರ್ಷಕ ಚಿತ್ತಾರ ಜನರ ಕಣ್ಮನ ಸೆಳೆಯಿತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ತುಂಗಾ ನದಿಯಲ್ಲಿ ಶ್ರೀರಾಮೇಶ್ವರ ದೇವರ ಉತ್ಸವಮೂರ್ತಿಯ ಆಕರ್ಷಕ ತೆಪ್ಪೋತ್ಸವ ನಡೆಯಿತು. ವಿಭಿನ್ನ ಆಲಂಕಾರದ ತೆಪ್ಪವನ್ನು ಸಿದ್ಧಪಡಿಸಲಾಗಿತ್ತು. ತೆಪ್ಪೋತ್ಸವ ಕಣ್ತುಂಬಿಕೊಂಡ ಜನರು, ದೇವರಿಗೆ ನಮಿಸಿದರು.
ಒಂದೂವರೆ ಗಂಟೆಯ ಸಿಡಿಮದ್ದು ಪ್ರದರ್ಶನ
ರಾಮ ದೇವರಿಗೆ ತೆಪ್ಪೋತ್ಸವದ ದೀಪ ಬೆಳಗುತ್ತಿದ್ದಂತೆ ಸಿಡಿಮದ್ದು ಪ್ರದರ್ಶನ ಆರಂಭವಾಯಿತು. ಸುಮಾರು ಒಂದೂವರೆ ಗಂಟೆ ಸಿಡಿಮದ್ದುಗಳು ಆಗಸದಲ್ಲಿ ಬಣ್ಣ ಬಣ್ಣದ ಚಿತ್ತಾರ ಬಿಡಿಸಿದವು. ಹಲವರು ಇದನ್ನು ತಮ್ಮ ಮೊಬೈಲ್’ನಲ್ಲಿ ಸೆರೆ ಹಿಡಿದು ಸಂಭ್ರಮಿಸಿದರು. ತಮಿಳುನಾಡಿನ ಶಿವಕಾಶಿಯ ಪ್ರಸಿದ್ಧ ಪಟಾಕಿ ತಜ್ಞರು ಸಿಡಿಮದ್ದು ಪ್ರದರ್ಶನವನ್ನು ಯಶಸ್ವಿಯಾಗಿ ನೆರವೇರಿಸಿದರು.
ಎಲ್ಲೆಲ್ಲೂ ಜನವೋ ಜನ
ಶ್ರೀರಾಮೇಶ್ವರ ದೇವರ ಜಾತ್ರೆಯ ಪ್ರಮುಖ ಆಕರ್ಷಣೆ ತೆಪ್ಪೋತ್ಸವ ಮತ್ತು ಸಿಡಿಮದ್ದು ಪ್ರದರ್ಶನ. ಇದನ್ನು ಕಣ್ತುಂಬಿಕೊಳ್ಳಲು ಭಾರಿ ಸಂಖ್ಯೆಯ ಜನರು ತುಂಗಾ ನದಿಯ ದಂಡೆ ಮೇಲೆ ಸೇರಿದ್ದರು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದಲೂ ಜನರು ಆಗಮಿಸಿದ್ದರು. ಪಟಾಕಿ ಸಿಡಿದಾಗ ಜನರು ಸಂಭ್ರಮಿಸುತ್ತಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
Thirthahalli Teppotsava in Tunga River. Fire Crackers Burnt for one and half hour.