ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 15 ಮೇ 2020
ತೀರ್ಥಹಳ್ಳಿಯ ಕರೋನ ಸೋಂಕಿತನನ್ನು ರಾಜ್ಯ ಸರ್ಕಾರ ಪೇಷೆಂಟ್ ನಂಬರ್ 995 ಎಂದು ಗುರುತಿಸಿದೆ. ಮಧ್ಯಾಹ್ನ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ನಲ್ಲಿ ಪಿ 995ನ ಟ್ರಾವಲ್ ಹಿಸ್ಟರಿಯನ್ನು ತಿಳಿಸಲಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಪಿ 995ನ ಟ್ರಾವಲ್ ಹಿಸ್ಟರಿ ಏನು?
ತೀರ್ಥಹಳ್ಳಿಯ ಪಿ995ನ ವಯಸ್ಸು 42 ಎಂದು ತಿಳಿದು ಬಂದಿದೆ. ಈತ ಮಹಾರಾಷ್ಟ್ರ ರಾಜ್ಯದ ಮುಂಬೈನಿಂದ ಹಿಂತಿರುಗಿದ್ದಾನೆ. ಆ ಬಳಿಕ ಸಾಮಾನ್ಯ ಆರೋಗ್ಯ ತಪಾಸಣೆಗೆ ಒಳಗಾಗಿ ಊರಿಗೆ ತೆರಳಿದ್ದರು.

ಮನೆಯವರಿಗೂ ಕ್ವಾರಂಟೈನ್
ಪಿ995ಗೆ ಕರೋನ ಪಾಸಿಟಿವ್ ಬಂದಿರುವುದು ದೃಢವಾಗುತ್ತಿದ್ದಂತೆ ಆತನ ಕುಟುಂಬದವರನ್ನು ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈತನಕ ಪ್ರಾಥಮಿಕ ಸಂಪರ್ಕದಲ್ಲಿದ್ದ 12 ಮಂದಿಯನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
ಆಶಾ ಕಾರ್ಯಕರ್ತೆಗೆ ಹೋಂ ಕ್ವಾರಂಟೈನ್
ಇನ್ನು ಪಿ995 ಮನೆಗೆ ಹೋಗಿ ಹೋಂ ಕ್ವಾರಂಟೈನ್ ಕುರಿತು ಸೂಚನೆ ನೀಡಿ, ಮನೆ ಮುಂದೆ ಮಾಹಿತಿಯ ಸ್ಟಿಕರ್ ಅಂಟಿಸಿದ್ದ ಆಶಾ ಕಾರ್ಯಕರ್ತೆಗೂ ಸಂಕಷ್ಟ ಎದುರಾಗಿದೆ. ಅವರಿಗೂ ಸ್ವಗೃಹ ಏಕಂತವಾಸದಲ್ಲಿ ಇರುವಂತೆ ಸೂಚಿಸಲಾಗಿದೆ.

ಮನೆಯಿಂದ ಯಾರೂ ಹೊರಬರುವಂತಿಲ್ಲ
ಪಿ995ನ ಗ್ರಾಮದಲ್ಲಿ ಯಾರು ಮನೆಯಿಂದ ಹೊರ ಬರುವಂತಿಲ್ಲ ಎಂದು ಸೂಚಿಸಲಾಗಿದೆ. ದಿನಸಿ ಸೇರಿದಂತೆ ಯಾವುದೇ ವಸ್ತುಗಳು ಬೇಕಿದ್ದಲ್ಲಿ ಆರ್ಡರ್ ಮಾಡಿದರೆ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಇನ್ನು, ಗ್ರಾಮದಲ್ಲಿ ಎಲ್ಲರಿಗೂ ಕೋವಿಡ್ ಟೆಸ್ಟ್ ನಡೆಸಲಾಗುತ್ತಿದೆ.
ವಾಟ್ಸಪ್ನಲ್ಲಿ ಅಂತೆ, ಕಂತೆಯದ್ದೇ ಅಬ್ಬರ
ಪಿ995 ಜೊತೆಗೆ ಸಂಪರ್ಕದಲ್ಲಿದ್ದವರ ಪತ್ತೆಗೆ ಜಿಲ್ಲಾಡಳಿತ ಹರಸಾಹಸ ಪಡುತ್ತಿದ್ದರೆ, ಸಾಮಾಜಿಕ ಜಾಲತಾಣದಲ್ಲಿ ಅಂತೆ ಕಂತೆಗಳು ಜೀವ ಪಡೆದುಕೊಂಡಿದೆ. ಆದರೆ ಇದ್ಯಾವುದಕ್ಕೂ ಜಿಲ್ಲಾಡಳಿತ ಸ್ಪಷ್ಟನೆ ನೀಡಿಲ್ಲ. ಸುಳ್ಳು ಸುದ್ದಿಗಳನ್ನು ಹಬ್ಬಿಸಿ, ಆತಂಕ ಹುಟ್ಟಿಸಿದೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]