ಶಿವಮೊಗ್ಗ ಲೈವ್.ಕಾಂ |THIRTHAHALLI NEWS | 25 NOVEMBER 2020
ಅದ್ಧೂರಿ ವಿವಾಹದ ಬದಲು ತಾನು ಓದಿದ ಶಾಲೆಗೆ ಹಣ ದೇಣಿಗೆ ನೀಡಿ, ಯುವತಿಯೊಬ್ಬರು ಜನ ಮೆಚ್ಚುಗೆ ಗಳಿಸಿದ್ದಾರೆ. ಮದುವೆ ಲಕ್ಷಾಂತರ ರುಪಾಯಿ ಖರ್ಚು ಮಾಡುವ ಬದಲು, ಶಾಲೆಯ ಅಭಿವೃದ್ಧಿದಾಗಿ ಒಂದು ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ತೀರ್ಥಹಳ್ಳಿಯ ತಾಲೂಕು ಮನಸ್ಸುಗಾರ ಗ್ರಾಮದ ಟೀಕಪ್ಪ ಗೌಡ ಅವರ ಪುತ್ರಿ ಚೇತನಾ ಒಂದು ಲಕ್ಷ ರೂ. ಹಣವನ್ನು ಶಾಲೆಗೆ ದೇಣಿಗೆ ನೀಡಿದ್ದಾರೆ. ತಾವು ಓದಿದ ಗುಡ್ಡೇಕೇರಿ ಪ್ರೌಢಶಾಲೆ ಮತ್ತು ಹೊನ್ನೇತಾಳು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ತಮ್ಮ ತಂದೆಯ ಹೆಸರಿನಲ್ಲಿ ತಲಾ 50 ಸಾವಿರ ರೂ. ದೇಣಿಗೆ ನೀಡಿದ್ದಾರೆ.
ಮದುವೆಗೂ ಮೊದಲು ದೇಣಿಗೆ
ಅದ್ಧೂರಿ ಮದುವೆಯಿಂದ ದುಂದು ವೆಚ್ಚ ಬೇಡ ಎಂಬುದು ಚೇತನಾ ಅವರ ನಿಲುವು. ಹಾಗಾಗಿ ಮದುವೆಗೆಂದು ಕೂಡಿಟ್ಟ ಹಣವನ್ನು ಶಾಲೆಯ ಅಭಿವೃದ್ಧಿಗೆ ದೇಣಿಗೆ ನೀಡಿದ್ದಾರೆ. ನವೆಂಬರ್ 26ರಂದು ಚೇತನಾ ಅವರು ಹಸೆಮಣೆ ಏರಲಿದ್ದಾರೆ.
ಗುಡ್ಡೇಕೇರಿ ಶಾಲೆಯ ಎರಡು ಕೊಠಡಿಗಳಿಗೆ ಮತ್ತು ಹೊನ್ನೆತಾಳು ಶಾಲೆಯ ವರಾಂಡಕ್ಕೆ ಟೈಲ್ಸ್ ಅಳವಡಿಸಲು ಈ ಹಣವನ್ನು ಎಸ್ಡಿಎಂಸಿ ಸದಸ್ಯರಲ್ಲಿ ಚೇತನಾ ಮನವಿ ಮಾಡಿದರು. ಎಸ್ಡಿಎಂಸಿ ಅಧ್ಯಕ್ಷ ನಿತ್ಯಾನಂದ ಅವರಿಗೆ ಚೆಕ್ ಹಸ್ತಾಂತರಿಸಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]