ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 8 DECEMBER 2022
ತೀರ್ಥಹಳ್ಳಿ : ಆಗುಂಬೆ ಘಾಟಿಯಲ್ಲಿ (agumbe ghat) ಲಾರಿ ಟೈರ್ ಸ್ಪೋಟಗೊಂಡಿದೆ. ಹಾಗಾಗಿ ಘಾಟಿಯಲ್ಲಿ ಕೆಲವು ಹೊತ್ತು ವಾಹನ ಸಂಚಾರ ಸ್ಥಗಿತವಾಗಿತ್ತು.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಘಾಟಿಯ 8ನೇ ತಿರುವಿನಲ್ಲಿ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಕ್ಯಾಂಟರ್ ಲಾರಿಯ ಹಿಂಬದಿ ಟೈರ್ ಸ್ಪೋಟಗೊಂಡಿದೆ. ತಿರುವಿನಲ್ಲೇ ಲಾರಿ ನಿಂತಿದ್ದರಿಂದ ಇತರೆ ವಾಹನಗಳ ಸಂಚಾರಕ್ಕೆ ಕಷ್ಟವಾಗಿತ್ತು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಪೊಲೀಸರು ಕ್ರೇನ್ ತರಿಸಿ ಲಾರಿಯನ್ನು ಪಕಕ್ಕೆ ಸರಿಸಿದ್ದಾರೆ. ಬಸ್ಸುಗಳು (agumbe ghat) ಕೂಡ ಸುಗಮವಾಗಿ ಸಂಚರಿಸಲು ಅವಕಾಶ ಕಲ್ಪಿಸಲಾಯಿತು. ಇದರಿಂದ ವಾಹನಗಳು ನಿಧಾನವಾಗಿ ಸಂಚರಿಸುತ್ತಿವೆ.
(agumbe ghat)
ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್
ತಿರುವಿನಲ್ಲಿ ಲಾರಿ ನಿಂತಿದ್ದರಿಂದ ಹಿಂಬದಿಯಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ತೀರ್ಥಹಳ್ಳಿ ಕಡೆಯಲ್ಲೂ ದೊಡ್ಡ ಸಂಖ್ಯೆಯ ವಾಹನಗಳು ನಿಂತಿವೆ. ಸೋಮೇಶ್ವರದಲ್ಲಿ ಘಾಟಿಯ ಪ್ರವೇಶದಲ್ಲಿ ಪೊಲೀಸರು ವಾಹನಗಳನ್ನು ತಡೆ ಹಿಡಿದಿದ್ದಾರೆ. ಒಮ್ಮೆಗೆ ಕೆಲವು ವಾಹನಗಳನ್ನು ಘಾಟಿಯ ಮೇಲೆ ಬಿಡಲಾಗುತ್ತಿದೆ.
ಇದನ್ನೂ ಓದಿ – ಭತ್ತ ಒಕ್ಕಲು ವೇಳೆ ಯಂತ್ರಕ್ಕೆ ಸಿಲುಕಿ ರೈತನ ಬಲಗೈ ಕಟ್