ನೀರಿನ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿ ಹೋದ ಮಹಿಳೆ

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 07 ಅಕ್ಟೋಬರ್ 2021

ರಭಸವಾಗಿ ಹರಿಯುತ್ತಿದ್ದ ಹಳ್ಳದಲ್ಲಿ ಮಹಿಳೆಯೊಬ್ಬರು ಕೊಚ್ಚಿ ಹೋಗಿದ್ದಾರೆ. ಹಳ್ಳ ದಾಟುತ್ತಿದ್ದಾಗ ಘಟನೆ ಸಂಭವಿಸಿದೆ. ಸ್ವಲ್ಪ ದೂರದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ.

AVvXsEgemMGsSzpizzvUxGttQV8hS7sDaeGFPE2hlPzUtpm oNqowXIm K7PTTddlQ1GsT nY0S xFhdkMv bjK6iOPeyhEmFI cBCgbbeW9Ki2IhoPHlGTBhOI8jrH2f Pag4OaaK2m0Evq1gfIjqo
ಜಸ್ಟಿನ್ ಮಚಾದೋ

ತೀರ್ಥಹಳ್ಳಿ ತಾಲೂಕು ನೆರಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಡಿ ಬಳಿ ಹಳ್ಳ ದಾಟುವಾಗ ರೈತ ಮಹಿಳೆಯೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಅಗಸರಕೊಪ್ಪದ ಜೆರಾಲ್ಡ್ ಮಚಾದೋ ಅವರ ಪತ್ನಿ ಜಸ್ಟಿನ್ ಮಚಾದೋ (36) ಮೃತ ದು ರ್ದೈವಿ.

ಗದ್ದೆಗೆ ಹೋಗಲು ಹಳ್ಳ ದಾಟುವಾಗ ಈ ಅವಘಡ ಸಂಭವಿಸಿದೆ. ಜಸ್ಟಿನ್ ಮಚಾದೋ ಎಂದಿನಂತೆ ಮಗನ ಜತೆ ಗದ್ದೆ ಕೆಲಸಕ್ಕೆ ಹೋಗುವಾಗ ಅಗಸರಕೊಪ್ಪ ಗದ್ದೆ ಸಮೀಪದ ಮರಡಿ ಹಳ್ಳ ದಾಟಲು ಹೋಗಿದ್ದಾರೆ. ಆಗ ಭಾರಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು ಮೃತದೇಹವು ಶಿರುಪತಿ ಹಿಂಭಾಗದ ಹೊಳೆಯಲ್ಲಿ ದೊರೆತಿದೆ.

LifeSpring%2BKan%2B02

ತಾಯಿ ಜತೆ ಹಳ್ಳ ದಾಟಲು ಹೋಗಿದ್ದ 10 ವರ್ಷದ ಮಗ ಜೊಯೆಲ್ ಅಪಾಯದಿಂದ ಪಾರಾಗಿದ್ದಾನೆ. ನದಿ ನೀರಲ್ಲಿ ಕೊಚ್ಚಿ ಹೋಗುವಾಗಲೂ ಮಗನನ್ನು ಇಳಿಯಬೇಡ’ ಎಂದು ಕೂಗಿ ಅಪಾಯದಿಂದ ಮಗನನ್ನು ಜಸ್ಟಿನ್ ಮಚಾದೋ ಪಾರು ಮಾಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ಮೃತ ದೇಹವನ್ನು ಶವ ಪರೀಕ್ಷೆಗಾಗಿ ಜೆ.ಸಿ.ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1632381434119645 4

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ ಮೂಲಕ ಸುದ್ದಿಗಾಗಿ 7411700200

Leave a Comment