ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 22 ಜುಲೈ 2019
ತನಿಕೆ ಆರಂಭವಾಗಿದ್ದು ಕಳುವಾಗಿದ್ದ ಒಂದು ಬೈಕ್ ಪತ್ತೆಗೆ. ಆದ ರೆ ಭೇದಿಸಿದ್ದು ಹತ್ತು ಬೈಕ್ ಕಳ್ಳತನ ಕೇಸುಗಳನ್ನು. ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು, ವಿವಿಧ ಠಾಣೆಯಲ್ಲಿ ದಾಖಲಾಗಿರುವ ಹತ್ತು ಬೈಕ್ ಕಳವು ಪ್ರಕರಣದ ಆರೋಪಿಯನ್ನು ಬೈಕುಗಳ ಸಹಿತ ವಶಕ್ಕೆ ಪಡೆದಿದ್ದಾರೆ.
ಕಳ್ಳ ಸಿಕ್ಕಿಬಿದ್ದಿದ್ದು ಹೇಗೆ?
ಬೆಳಲಕಟ್ಟೆ ಗ್ರಾಮದ ಹಾಲೇಶಪ್ಪ ಎಂಬುವವರು ಮೇಲಿನಹನಸವಾಡಿ ಗ್ರಾಮದ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬೈಕ್ ದಿಢೀರ್ ನಾಪತ್ತೆಯಾಗಿತ್ತು. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಆರಂಭಿಸಿದ್ದ ಪೊಲೀಸರಿಗೆ ವ್ಯಕ್ತಿಯೊಬ್ಬನ ಮೇಲೆ ಗುಮಾನಿ ಮೂಡಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಎಲ್ಲವನ್ನು ಬಾಯಿಬಿಟ್ಟಿದ್ದಾನೆ.

ಯಾರು ಗೊತ್ತಾ ಆ ಕಳ್ಳ?
ಬೆಳಲಕಟ್ಟೆ ಗ್ರಾಮಾದ ಪ್ರಭು ಎಂಬಾತನೇ ಬಂಧಿತ. ವಿಚಾರಣೆ ವೇಳೆ ಈತ ಹತ್ತು ಬೈಕ್ ಕಳ್ಳತನ ಮಾಡಿರುವುದನ್ನು ಬಾಯಿಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಕಳ್ಳತನ ಮಾಡಿದ್ದ ಹತ್ತು ಬೈಕ್’ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಠಾಣೆ ಸಬ್ ಇನ್ಸ್’ಪೆಕ್ಟರ್ ಮಂಜು ಕುಪ್ಪೆಲೂರು, ಯಶವಂತಕುಮಾರ್, ಮಧು ಪ್ರಸಾದ್, ಜಯಪ್ಪ, ಜಗದೀಶ್, ಸುಬ್ರಮಣಿ, ಚಾಲಕ ಶಿವಕುಮಾರ್ ಮತ್ತು ಮಂಜುನಾಥ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]