SHIVAMOGGA LIVE NEWS |6 JANUARY 2023
SHIMOGA : ಸೀತಾ ಕಲ್ಯಾಣೋತ್ಸವದ ಅಂಗವಾಗಿ ಶಿವಮೊಗ್ಗ ತುಂಗಾ ನದಿಯಲ್ಲಿ (tunga river) ಶ್ರೀ ಸೀತಾರಾಮಾಂಜನೇಯ ಸ್ವಾಮಿಯ ವೈಭವದ ತೆಪ್ಪೋತ್ಸವ ನಡೆಯಿತು. ದೊಡ್ಡ ಸಂಖ್ಯೆಯ ಭಕ್ತರು ತೆಪ್ಪೋತ್ಸವವನ್ನು ಕಣ್ತುಂಬಿಕೊಂಡು ಪುನೀತರಾದರು.
ಕೋರ್ಪಲಯ್ಯ ಛತ್ರ ಮಂಟಪದ ಬಳಿ ತುಂಗಾ ನದಿಯಲ್ಲಿ (tunga river) ಇವತ್ತು ತೆಪ್ಪೋತ್ಸವ ನೆರವೇರಿತು. ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಮೂರ್ತಿಗಳನ್ನು ತೆಪ್ಪದಲ್ಲಿ ಇರಿಸಿ, ತುಂಗಾ ನದಿಯಲ್ಲಿ ಉತ್ಸವ ನೆರವೇರಿಸಲಾಯಿತು.
ತೆಪ್ಪೋತ್ಸವ ಆರಂಭವಾಗುತ್ತಿದ್ದಂತೆ ಭಕ್ತರು ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ಘೋಷಣೆಗಳನ್ನು ಕೂಗಿದರು. ತೆಪ್ಪೋತ್ಸವದ ಸಂದರ್ಭ ಬಣ್ಣ ಬಣ್ಣದ ಸಿಡಿಮದ್ದುಗಳನ್ನು ಸಿಡಿಸಲಾಯಿತು. ಇದನ್ನು ಕಣ್ತುಂಬಿಕೊಂಡು ಜನರು ಖುಷಿ ಪಟ್ಟರು. ಇನ್ನು, ಹೊಳೆಯಲ್ಲಿ ದೀಪಗಳನ್ನು ತೇಲಿ ಬಿಡಲಾಯಿತು. ಇದು ತೆಪ್ಪೋತ್ಸವದ ಮೆರಗು ಹೆಚ್ಚಿಸಿದರು.
ಇದನ್ನೂ ಓದಿ – ಶಿವಮೊಗ್ಗದ ವಾಹನ ಸವಾರರೆ ಹುಷಾರ್, ಇನ್ಮುಂದೆ ಯದ್ವತದ್ವ ಗಾಡಿ ಓಡಿಸಿದರೆ ಕೆಂಗಣ್ಣು ಬೀರಲಿವೆ ಸಿಸಿಟಿವಿ