ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 13 DECEMBER 2022
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಶಿವಮೊಗ್ಗ : ದೇವಸ್ಥಾನದ (kudli temple) ಬಾಗಿಲಿನ ಬೀಗ ಒಡೆದು ದೇವರ ಆಭರಣಗಳನ್ನು ಕಳ್ಳತನ ಮಾಡಲಾಗಿದೆ. ಕೂಡ್ಲಿಯ ಗ್ರಾಮದ ಶ್ರೀ ಚಿಂತಾಮಣಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಘಟನೆ ಸಂಭವಿಸಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ದೇವರ (kudli temple) ಬೆಳ್ಳಿ ಕಿರೀಟ, ಬೆಳ್ಳಿ ಕಿವಿ, ಬೆಳ್ಳಿ ಕಣ್ಣು, ಬೆಳ್ಳಿ ಮೂಗು, ಬೆಳ್ಳಿ ನಾಲಗೆ, ಬೆಳ್ಳಿ ಮೀಸೆ, ಶಂಕಚಕ್ರ, ಬೆಳ್ಳಿ ಸೇವಂತಿಗೆ ಸರ, ಬೆಳ್ಳಿಯ ಎರಡು ಕಾಲು ದೀಪ, ಬೆಳ್ಳಿ ಸಾಲಿಗ್ರಾಮ, ಬೆಳ್ಳಿಯ ತುಳಸಿ ಸರ ಸೇರಿ 2 ಕೆ.ಜಿ 75 ಗ್ರಾಂ ತೂಕದ ಬೆಳ್ಳಿ ಆಭರಣ ಕಳ್ಳತನವಾಗಿದೆ. 5 ಕೆ.ಜಿ. ಹಿತ್ತಾಳೆ ಪಾತ್ರೆ ಮತ್ತು ಇತರೆ ವಸ್ತುಗಳು ಕಳುವಾಗಿದೆ. ಇವುಗಳಿಗೆ 1.06 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ – ಭದ್ರಾವತಿ – ಶಿವಮೊಗ್ಗ ನಡುವೆ ಕೈಕೊಟ್ಟ ಇಂಟರ್ ಸಿಟಿ ರೈಲು ಇಂಜಿನ್
ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.