ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 10 ಡಿಸೆಂಬರ್ 2019
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಒಮ್ಮೆ ಕಳವಾದ ಮೊಬೈಲ್ ವಾಪಸ್ ಕೈಸೇರುವುದು ವಿರಳ. ಅದರಲ್ಲೂ ಕಳ್ಳತನದ ಮಾಲು ಖರೀದಿಸಿದವರೇ ಪೋಸ್ಟ್ ಮೂಲಕ ಹೊರದೇಶದಿಂದ ಆ ಮೊಬೈಲ್ಗಳನ್ನು ಹಿಂದುರುಗಿಸುವುದು ಅಪರೂಪ. ಆದರೆ, ಇಂತಹ ಸನ್ನಿವೇಶಕ್ಕೆ ದೊಡ್ಡಪೇಟೆ ಪೊಲೀಸ್ ಠಾಣೆ ಸಾಕ್ಷಿಯಾಗಲಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಹೌದು, ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಕಳವಾದ ಸ್ಮಾರ್ಟ್ಫೋನ್ಗಳು ಮಾಲೀಕರ ಕೈಸೇರಲಿದ್ದು, ದುಬೈನಿಂದ ಅವುಗಳನ್ನು ಪಾರ್ಸಲ್ ಮಾಡಲಾಗಿದೆ.
ಪೊಲೀಸರ ಮೊಬೈಲ್’ಗಳನ್ನೇ ಕದ್ದಿದ್ದ ಕಳ್ಳ
ಅಕ್ಟೋಬರ್ನಲ್ಲಿ ನಡೆದ ಹಿಂದೂ ಮಹಾಸಭಾ ಗಣೇಶ ಮೆರವಣಿಗೆ ಬಂದೋಬಸ್ತ್ಗೆ ಬಂದಿದ್ದ ಪೊಲೀಸ್ ಸಿಬ್ಬಂದಿ ತಂಗಿದ್ದ ಕಲ್ಯಾಣ ಮಂಟಪದಿಂದಲೇ 24 ಮೊಬೈಲ್ಗಳನ್ನು ಎಗರಿಸಿದ್ದ ಗ್ಯಾಂಗ್ ಖಾಕಿ ಜಾಲಕ್ಕೆ ಸಿಕ್ಕಿದೆ. ವಿಚಾರಣೆ ಬಳಿಕ ಮೊಬೈಲ್ ಮಾರಾಟ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ತಕ್ಷಣ ಖರೀದಿಸಿದ ಎಲ್ಲರಿಗೂ ಕರೆ ಮಾಡಲಾಗಿದೆ. ಇದುವರೆಗ 24ರಲ್ಲಿ 13 ಸ್ಮಾರ್ಟ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ ಮೊಬೈಲ್ಗಳು ದುಬೈನಲ್ಲಿದ್ದು, ಅವರೂ ಪಾರ್ಸಲ್ ಮಾಡಿದ್ದು, ಮಾಲೀಕರ ಕೈಸೇರಲಿವೆ.
ಕಳ್ಳತನ ಮಾಲು ಬೀಚ್’ಗಳಲ್ಲಿ ಮಾರಾಟ
ಪ್ರಕರಣದ ಕಿಂಗ್ ಪಿನ್ ಕಾರ್ತಿಕ್ ಅಲಿಯಾಸ್ ಮಂಜು (27) ವಿರುದ್ಧ ತುಮಕೂರಿನಲ್ಲಿ ನಾಲ್ಕು ಹಾಗೂ ಹಾಸನದಲ್ಲಿ ಒಂದು ಪ್ರಕರಣ ದಾಖಲಾಗಿವೆ. ಐಷಾರಾಮಿ ಬದುಕು ಸಾಗಿಸುವುದಕ್ಕಾಗಿ ಬೈಕ್ ಮತ್ತು ಮೊಬೈಲ್ ಕಳ್ಳತನ ಮಾಡುತ್ತಿದ್ದ. ಈ ಬೈಕೇ ಇವನ ಪಾಲಿಗೆ ಕಂಟಕವಾಗಿ ಮಾರ್ಪಟ್ಟಿದೆ. ಕಳವು ಮಾಡುವುದಕ್ಕಾಗಿಯೇ ತಿಪಟೂರಿನಲ್ಲಿ ಶಿವಮೊಗ್ಗಕ್ಕೆ ಕಳವು ಮಾಡಿದ ಬೈಕ್ನಲ್ಲೇ ಬಂದಿದ್ದ. ಖಾಸಗಿ ಬಸ್ ನಿಲ್ದಾಣ ಹಿಂಭಾಗದಲ್ಲಿರುವ ದೇವಸ್ಥಾನದ ಹುಂಡಿ ಒಡೆದು ಕಳವು ಮಾಡುವಾಗ ಜನರಿಗೆ ಸಂಶಯ ಬಂದು ಹಿಂಬಾಲಿಸಿದಾಗ ಗಾಡಿಯನ್ನು ಅಲ್ಲಿಯೇ ಬಿಟ್ಟು ಕಾಲು ಕಿತ್ತಾದ್ದಾನೆ. ಬಳಿಕ ಪೊಲೀಸರ ಮೊಬೈಲ್ಗಳಿಗೆ ಸ್ಕೆಚ್ ಹಾಕಿದ್ದಾನೆ.
ಎಮೋಷನಲ್ ಡ್ರಾಮಾ
ಶೋಕಿ ಬದುಕಿಗಾಗಿ ಕಳ್ಳತನ ಮಾಡುತ್ತಿದ್ದ ಕಾರ್ತಿಕ್ ಕದ್ದ ಮೊಬೈಲ್ಗಳನ್ನು ಕರ್ನಾಟಕದಲ್ಲಿ ಮಾರಾಟ ಮಾಡುತ್ತಿರಲಿಲ್ಲ. ಅದರ ಬದಲು ಹೊರರಾಜ್ಯಗಳಿಗೆ ಹೋಗಿ ಬೀಚ್ ಪ್ರದೇಶಗಳಲ್ಲಿ ಬರುವ ಪ್ರವಾಸಿಗರು, ಸಾರ್ವಜನಿಕರಿಗೆ ತಾನು ಬೇರೊಂದು ಸ್ಥಳದಿಂದ ಬಂದಿದ್ದು, ಮನೆಗೆ ಹೋಗಲು ದುಡ್ಡಿಲ್ಲ. ನನ್ನ ಮೊಬೈಲ್ ಖರೀದಿಸಿ ಎಂದು ಭಾವನಾತ್ಮಕವಾಗಿ ಜನರನ್ನು ಪುಸಲಾಯಿಸಿ ಮೊಬೈಲ್ ಮಾರಾಟ ಮಾಡುತ್ತಿದ್ದ. ಈ ಮಧ್ಯೆ ಕದ್ದ ಸ್ಮಾರ್ಟ್ಫೋನ್ಗಳ ಇಎಂಐ ನಂ. ಕೂಡ ಬದಲಿಸುತ್ತಿದ್ದ. ಈ ಚಾಲಾಕಿತನದಿಂದಾಗಿ ಈತ ಪೊಲೀಸರ ಕೈಗೆ ಸಿಕ್ಕಿರಲಿಲ್ಲ.
15 – 20 ದಿನ ಮುಕ್ಕಾಂ
ಕಳವು ಮಾಡಲು ಉದ್ದೇಶಿದ ಸ್ಥಳದಲ್ಲಿ ಕನಿಷ್ಠ 15 – 20 ದಿನ ಮುಕ್ಕಾ ಹೂಡುತ್ತಿದ್ದ ಕಾರ್ತಿಕ್ ಈ ಅವಧಿಯಲ್ಲಿ ತನ್ನ ಕೆಲಸ ಮುಗಿಸಿ ಅಲ್ಲಿಂದ ಕಾಲು ಕೀಳುತ್ತಿದ್ದ. ಅದಕ್ಕಾಗಿ, ಸ್ಥಳೀಯ ಸ್ನೇಹಿತರನ್ನೇ ಬಳಸಿಕೊಳ್ಳುತ್ತಿದ್ದ. ಶಿವಮೊಗ್ಗದಲ್ಲೂ ಇದೇ ಟೆಕ್ನಿಕ್ ಬಳಸಿ, ಪೊಲೀಸರ ಮೊಬೈಲ್ಗಳನ್ನೇ ಕದ್ದಿದ್ದಾನೆ.
ದೊಡ್ಡಪೇಟೆ ಪೊಲೀಸ್ ಠಾಣೆ ಸಿಪಿಐ ಆರ್.ವಸಂತ್ ಕುಮಾರ್ ನೇತೃತ್ವದಲ್ಲಿ ಪಿಎಸ್ಐ ಶಂಕರ್ ಮೂರ್ತಿ, ಹೆಡ್ ಕಾನ್ಸ್ಟೆಬಲ್ ಶೇಖರ್, ಪೇದೆ ಕಿರಣ್, ಲಚ್ಚಾ ನಾಯಕ, ವಿಜಯ್ ತಂಡ ಒಂದು ತಿಂಗಳ ಕಾರ್ಯಾಚರಣೆ ಬಳಿಕ ಸುಳಿವು ಸಿಕ್ಕಿದೆ. ಸ್ಥಳೀಯವಾಗಿ ಬಳಸಿಕೊಂಡಿದ್ದ ಕೆಲ ಸ್ನೇಹಿತರು ಸಿಕ್ಕಿದ್ದು, ವಿಚಾರಣೆ ಮಾಡಿದ ಬಳಿಕ ಆತನನ್ನು ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Doddapete Police to get three mobiles from Dubai. These mobiles have been theft by mobile Thieves during Hindu Mahasabha Ganapathi procession bandobast.