SHIVAMOGGA LIVE NEWS | 22 MAY 2023
LAKKAVALLI : ಈಜಲು ತೆರಳಿದ್ದಾಗ ಭದ್ರಾ ನಾಲೆಯಲ್ಲಿ ಮೂವರು ಕೊಚ್ಚಿ (Drowned) ಹೋಗಿದ್ದಾರೆ. ಓರ್ವ ಯುವತಿಯ ಮೃತದೇಹ ಪತ್ತೆಯಾಗಿದೆ. ಇನ್ನಿಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ – ಸಂಜೆ 7 ಗಂಟೆಗೆ ಬಂದ ಮೆಸೇಜ್ನಿಂದ ಫಜೀತಿಗೆ ಸಿಲುಕಿದ ರೈತ, ಶಿವಮೊಗ್ಗದ ಪೊಲೀಸ್ ಠಾಣೆಗೆ ದೌಡು
ಲಕ್ಕವಳ್ಳಿ ಗ್ರಾಮದಲ್ಲಿ ಭಾನುವಾರ ಘಟನೆ ಸಂಭವಿಸಿದೆ. ಅನನ್ಯಾ (19), ಶಾಮ ಶಾಂಭವಿ (15) ಮತ್ತು ಸೋದರ ಮಾವ ರವಿ (34) ನಾಲೆಯಲ್ಲಿ ಕೊಚ್ಚಿ (Drowned) ಹೋಗಿದ್ದಾರೆ. ವಿಚಾರ ತಿಳಿದು ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ರಕ್ಷಣ ಕಾರ್ಯಾಚರಣೆ ನಡೆಸಿದರು. ಸೋಮವಾರ ಬೆಳಗ್ಗೆ ಯುವತಿಯ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಆಕೆಯನ್ನು ಅನನ್ಯಾ ಎಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಭೇಟಿ ನೀಡಿದ್ದರು. ಲಕ್ಕವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ