ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS |4 JANUARY 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SORABA : ಟಿಕೆಟ್ ಚೆಕಿಂಗ್ (ticket checking) ಮಾಡಲು ಬಸ್ ಹತ್ತಿದ ಸಂಚಾರ ನಿರೀಕ್ಷಕರೊಬ್ಬರ ಮೇಲೆ ಕಂಡಕ್ಟರ್ ಒಬ್ಬರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಹುಬ್ಬಳಿ ಕೇಂದ್ರ ಕಚೇರಿಯ ಸಂಚಾರಿ ನಿರೀಕ್ಷಕ ದಾನಪ್ಪ ಗೋಳ, ಕೇಂದ್ರ ಸಂಚಾರ ನಿರೀಕ್ಷಕ ಅಮರನಾಥ ಕುಂಟೋಜಿ ಅವರು ಟಿಕೆಟ್ ಚೆಕಿಂಗ್ (ticket checking) ಮಾಡಲು ಕೆ.ಎಸ್.ಆರ್.ಟಿ.ಸಿ ಬಸ್ ಒಂದನ್ನು ಹತ್ತಿದ್ದರು. ಸಂಚಾರಿ ನಿರೀಕ್ಷಕರನ್ನು ಕಂಡ ಕೂಡಲೆ ಕಂಡಕ್ಟರ್ ಪ್ರಯಾಣಿಕರಿಗೆ ಟಿಕೆಟ್ ವಿತರಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಸ್ ಹತ್ತಿದ ಕೂಡಲೆ ಕಂಡಕ್ಟರ್ ಬಳಿ ಇದ್ದ ಟಿಕೆಟ್ ವಿತರಣಾ ಮೆಷಿನ್ ಪಡೆದ ಸಂಚಾರಿ ನಿರೀಕ್ಷಕರು ಪರಿಶೀಲನೆ ನಡೆಸಿದರು. ಅಲ್ಲದೆ ತಮ್ಮನ್ನು ಕಂಡ ಕೂಡಲೆ ಟಿಕೆಟ್ ವಿತರಣೆ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ – ಸೊರಬ ತಾಲೂಕು ಪಂಚಾತಿಗೆ 17 ಕ್ಷೇತ್ರ ಫೈನಲ್, ಯಾವ್ಯಾವ ಹಳ್ಳಿ ಯಾವ ಕ್ಷೇತ್ರಕ್ಕೆ ಸೇರುತ್ತೆ? ಇಲ್ಲಿದೆ ಪಟ್ಟಿ
ಇದಕ್ಕೆ ಕಂಡಕ್ಟರ್ ತಮ್ಮ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದಾನಪ್ಪ ಗೋಳ ಆರೋಪಿಸಿದ್ದಾರೆ. ಕಂಡಕ್ಟರ್ ವಿರುದ್ಧ ಸೊರಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.