ಶಿವಮೊಗ್ಗ ಲೈವ್.ಕಾಂ | 1 ಮಾರ್ಚ್ 2019
ಕೊಟ್ಟಿಗೆಗೆ ನುಗ್ಗಿದ ಹುಲಿಯೊಂದು ಹಸುವೊಂದನ್ನು ಎಳೆದೊಯ್ದು ತಿಂದು ಹಾಕಿದೆ. ಇದರಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ತೀರ್ಥಹಳ್ಳಿಯ ಬಸವಾನಿ ಸಮೀಪದ ಕವಡೇಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ.
ನೀಲಕಂಠ ಭಟ್ ಎಂಬುವವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವೊಂದನ್ನು ಹಗ್ಗ ಸಹಿತ ಎಳೆದೊಯ್ದ ಹುಲಿ, ತಿಂದು ಹಾಕಿದೆ. ಹಸುವನ್ನು ಪೂರ್ತಿ ತಿಂದು ತಲೆ ಭಾಗವನ್ನು ಮಾತ್ರ ಬಿಟ್ಟು ಹೋಗಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಕೊಪ್ಪ ಮತ್ತು ತೀರ್ಥಹಳ್ಳಿ ಗಡಿ ಭಾಗದಲ್ಲಿರುವ ಕವಡೇಕಟ್ಟೆ ಗ್ರಾಮದಲ್ಲಿ ಕೆಲವೇ ಕಲವು ಮನೆಗಳಿವೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]
