SHIVAMOGGA LIVE NEWS | 28 DECEMBER 2022
ಶಿವಮೊಗ್ಗ : ಬೆಂಗಳೂರು ವಿಭಾಗದ ವಿವಿಧ ನಿಲ್ದಾಣಗಳಿಗೆ ರೈಲುಗಳು ತಲುಪುವ ಮತ್ತು ಹೊರಡುವ ಸಮಯವನ್ನು ಬದಲಾವಣೆ (Timing Change) ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಶಿವಮೊಗ್ಗದ ಕೆಲವು ರೈಲುಗಳು ಕೂಡ ಈ ಪಟ್ಟಿಯಲ್ಲಿದೆ.
(Timing Change)
ಯಾವ್ಯಾವ ರೈಲುಗಳ ಸಮಯ ಬದಲಾಗಿದೆ?
ರೈಲು ಸಂಖ್ಯೆ 06513 : ತುಮಕೂರು – ಶಿವಮೊಗ್ಗ ಟೌನ್ ಡೆಮು ಎಕ್ಸ್ ಪ್ರೆಸ್ : ಈವರೆಗೂ ಗುಬ್ಬಿ ನಿಲ್ದಾಣಕ್ಕೆ ಬೆಳಗ್ಗೆ 8.26ಕ್ಕೆ ತಲುಪಿ 8.27ಕ್ಕೆ ಹೊರಡುತ್ತಿತ್ತು. ಇನ್ಮುಂದೆ 8.24ಕ್ಕೆ ತಲುಪಲಿದೆ. 8.25ಕ್ಕೆ ಹೊರಡಲಿದೆ. (2023ರ ಜನವರಿ 2ರಿಂದ ಹೊಸ ಸಮಯ ಜಾರಿಯಾಗಲಿದೆ)
ರೈಲು ಸಂಖ್ಯೆ 16227 : ಮೈಸೂರು – ತಾಳಗುಪ್ಪ ಎಕ್ಸ್ ಪ್ರೆಸ್ : ಮಂಡ್ಯ, ಬೆಂಗಳೂರು, ಯಶವಂತಪುರ ಮತ್ತು ತುಮಕೂರು ನಿಲ್ದಾಣಗಳಲ್ಲಿ ಸಮಯ ಬದಲಾವಣೆಯಾಗಿದೆ. (2023ರ ಜನವರಿ 1ರಿಂದ ಹೊಸ ಸಮಯ ಜಾರಿಯಾಗಲಿದೆ)
ನಿಲ್ದಾಣ | ಹಿಂದಿನ ಸಮಯ | ಬದಲಾದ ಸಮಯ |
ಮಂಡ್ಯ | ರಾತ್ರಿ 8.16ಕ್ಕೆ ತಲುಪುತ್ತಿತ್ತು ರಾತ್ರಿ 8.18ಕ್ಕೆ ಹೊರಡುತ್ತಿತ್ತು | ರಾತ್ರಿ 8.17ಕ್ಕೆ ತಲುಪಲಿದೆ ರಾತ್ರಿ 8.18ಕ್ಕೆ ಹೊರಡಲಿದೆ |
ಬೆಂಗಳೂರು | ರಾತ್ರಿ 10.55ಕ್ಕೆ ತಲುಪುತ್ತಿತ್ತು ರಾತ್ರಿ 11.15ಕ್ಕೆ ಹೊರಡುತ್ತಿತ್ತು | ರಾತ್ರಿ 10.30ಕ್ಕೆ ತಲುಪಲಿದೆ ರಾತ್ರಿ 11ಕ್ಕೆ ಹೊರಡಲಿದೆ |
ಯಶವಂತಪುರ | ರಾತ್ರಿ 11.28ಕ್ಕೆ ತಲುಪುತ್ತಿತ್ತು ರಾತ್ರಿ 11.30ಕ್ಕೆ ಹೊರಡುತ್ತಿತ್ತು | ರಾತ್ರಿ 11.23ಕ್ಕೆ ತಲುಪಲಿದೆ ರಾತ್ರಿ 11.25ಕ್ಕೆ ಹೊರಡಲಿದೆ |
ತುಮಕೂರು | ರಾತ್ರಿ 12.13ಕ್ಕೆ ತಲುಪುತ್ತಿತ್ತು ರಾತ್ರಿ 12.15ಕ್ಕೆ ಹೊರಡುತ್ತಿತ್ತು | ರಾತ್ರಿ 12.18ಕ್ಕೆ ತಲುಪಲಿದೆ ರಾತ್ರಿ 12.20ಕ್ಕೆ ಹೊರಡಲಿದೆ |
ರೈಲು ಸಂಖ್ಯೆ 16581 : ಯಶವಂತಪುರ – ಶಿವಮೊಗ್ಗ ಟೌನ್ : ಈವರೆಗೂ ಯಶವಂತಪುರದಿಂದ ರಾತ್ರಿ 11.58ಕ್ಕೆ ಹೊರಡುತ್ತಿತ್ತು. ಇನ್ಮುಂದೆ 11.50ಕ್ಕೆ ಹೊರಡಲಿದೆ. ತುಮಕೂರಿಗೆ ರಾತ್ರಿ 12.55 ತಲುಪಿ, 12.57ಕ್ಕೆ ಹೊರಡುತ್ತಿತ್ತು. ಇನ್ಮುಂದೆ 12.38ಕ್ಕೆ ತಲುಪಿ, 12.40ಕ್ಕೆ ಹೊರಡಲಿದೆ. (2023ರ ಜನವರಿ 2ರಿಂದ ಹೊಸ ಸಮಯ ಜಾರಿಯಾಗಲಿದೆ)
ಇದನ್ನೂ ಓದಿ – ಶಿವಮೊಗ್ಗ – ಮೈಸೂರು ನಡುವೆ ಎಷ್ಟು ರೈಲುಗಳಿವೆ, ಎಲ್ಲೆಲ್ಲಿ ಸ್ಟಾಪ್ ಇದೆ, ಟೈಮಿಂಗ್ ಏನು?
ರೈಲು ಸಂಖ್ಯೆ 16582 : ಶಿವಮೊಗ್ಗ ಟೌನ್ – ಯಶವಂತಪುರ : ಈವರೆಗೂ ಯಶವಂತಪುರಕ್ಕೆ ಬೆಳಗ್ಗೆ 5.10ಕ್ಕೆ ತಲುಪುತ್ತಿತ್ತು. ಇನ್ಮುಂದೆ ಬೆಳಗ್ಗೆ 5 ಗಂಟೆಗೆ ತಲುಪಲಿದೆ. ತುಮಕೂರಿಗೆ ಬೆಳಗ್ಗೆ 3.38ಕ್ಕೆ ತಲುಪುತ್ತಿತ್ತು. ಇನ್ಮುಂದೆ 3.10ಕ್ಕೆ ತಲುಪಲಿದೆ. 3.12ಕ್ಕೆ ಹೊರಡಲಿದೆ. (2023ರ ಜನವರಿ 3ರಿಂದ ಹೊಸ ಸಮಯ ಜಾರಿಯಾಗಲಿದೆ)