ಶಿವಮೊಗ್ಗ ಲೈವ್.ಕಾಂ | 1 ಜನವರಿ 2019
ದಿನೇ ದಿನೇ ಮಲೆನಾಡಿನಲ್ಲಿ ಮಂಗನ ಕಾಯಿಲೆ ಆತಂಕ ಹೆಚ್ಚಾಗುತ್ತಿದೆ. ಈ ನಡುವೆ ಶರಾವತಿ ಕಣಿವೆ ಅಭಯಾಯರಣ್ಯದ ಮುಪ್ಪಾನೆ ಪ್ರಕೃತಿ ಶಿಬಿರ ಅರಣ್ಯ ವ್ಯಾಪ್ತಿಯಲ್ಲಿ, ಚಾರಣಕ್ಕೆ ನಿರ್ಬಂಧ ವಿಧಿಸಲಾಗಿದೆ.
ಜಿಲ್ಲಾ ವನ್ಯಜೀವಿ ವಿಭಾಗದ ವತಿಯಿಂದ ಈ ಆದೇಶ ಹೊರಡಿಸಲಾಗಿದೆ. ಮುಪ್ಪಾನೆ ಭಾಗದಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿರುವ ಹಿನ್ನೆಲೆ, ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಜ.1ರಿಂದ ಮುಂದಿನ ಆದೇಶದವರೆಗೂ ಚಾರಣಕ್ಕೆ ನಿರ್ಬಂಧ ವಿಧಿಸಲಾಗಿದೆ.

ಸದ್ಯದಲ್ಲೇ ಸಿಗಂದೂರು ಭಕ್ತರಿಗೂ ಮಾರ್ಗಸೂಚಿ
ಇನ್ನು, ಸಿಗಂದೂರು ಚೌಡೇಶ್ವರಿ ಸನ್ನಿಧಿಗೆ ತೆರಳುವ ಭಕ್ತರಿಗೆ, ಮಾರ್ಗಸೂಚಿ ಬಿಡುಗಡೆ ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯೋಜಿಸಿದೆ. ಸಂಕ್ರಾಂತಿ ಸಂದರ್ಭ, ಸಿಗಂದೂರಿಗೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ದೇವಸ್ಥಾನಕ್ಕೆ ತೆರಳುವ ಭಕ್ತರು, ಲಾಂಚ್ ಹತ್ತುವ ಹಸಿರುಮಕ್ಕಿ ಭಾಗದಲ್ಲಿ, ಮಂಗಗಳು ಅಸಹಜವಾಗಿ ಸಾವನ್ನಪ್ಪಿವೆ. ಈ ಭಾಗದಲ್ಲಿ ಪರಿಶೀಲನೆ ನಡೆಸಿದಾಗ ಮಂಗನ ಕಾಯಿಲೆ ಇರುವ ಕುರಿತು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ಮಾರ್ಗಸೂಚಿ ಬಿಡುಗಡೆ ಮಾಡಲು ಯೋಜಿಸಲಾಗಿದೆ.
ಭಕ್ತರು ಯಾವುದೇ ಕಾರಣಕ್ಕೂ ಅರಣ್ಯ ಪ್ರದೇಶದ ಒಳಗೆ ತೆರಳದಂತೆ ಸುಚಿಸಲಾಗುತ್ತಿದೆ. ಅಷ್ಟೇ ಅಲ್ಲ, ಶೀಘ್ರವೇ ಪ್ರವಾಸಿಗರಲ್ಲಿ ಮಂಗನ ಕಾಯಿಲೆ ಕುರಿತು ಜಾಗೃತಿ ಮೂಡಿಸುವ ಕರಪತ್ರಗಳನ್ನು ಹಂಚಲು ತೀರ್ಮಾನಿಸಲಾಗಿದೆ.
- ಅಡಿಕೆ ಧಾರಣೆ | 30 ಸೆಪ್ಟೆಂಬರ್ 2023 | ಎಲ್ಲೆಲ್ಲಿ ಎಷ್ಟಿದೆ ಇವತ್ತಿನ ಅಡಿಕೆ ರೇಟ್?
- ಅಮೀರ್ ಅಹಮದ್ ಸರ್ಕಲ್ನಲ್ಲಿ ಅಲಂಕಾರದ ವಿಚಾರದಲ್ಲಿ ಗೊಂದಲ, ಜಮಾವಣೆಯಾದ ಜನ, ಸದ್ಯ ಪರಿಸ್ಥಿತಿ ಶಾಂತ
- 314 ರೈಲು ವೇಳಾಪಟ್ಟಿ ಬದಲು, ಶಿವಮೊಗ್ಗದ ಯಾವ್ಯಾವ ರೈಲುಗಳ ಸಮಯ ಬದಲು?
- JOBS – ಶಿವಮೊಗ್ಗದ ಎರಡು ಕಡೆ ಕೆಲಸ ಖಾಲಿ ಇದೆ
- ಶಿವಮೊಗ್ಗದಲ್ಲಿ ಪ್ರತಿಭಟನೆಗಷ್ಟೆ ಸೀಮಿತವಾಯ್ತು ಬಂದ್, ನೆಹರು ರಸ್ತೆಯಲ್ಲಿ ಮಾತಿನ ಚಕಮಕಿ
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಕರೆ ಮಾಡಿ | 9964634494ಈ ಮೇಲ್ | [email protected]