SHIVAMOGGA LIVE NEWS | 7 ಮಾರ್ಚ್ 2022
ಸರ್ಕಾರಿ ವಸತಿ ಗೃಹದ ಮೇಲೆ ಮರ ಉರುಳಿ, ಮನೆ ಮತ್ತು ಅದರ ಮುಂದೆ ನಿಲ್ಲಸಿದ್ದ ಬೈಕ್ ಸಂಪೂರ್ಣ ಹಾನಿಗೀಡಾಗಿವೆ.
ಸಾಗರ ತಾಲೂಕು ಅರಲಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಆರೋಗ್ಯ ಸಹಾಯಕಿ ಗೌರಮ್ಮ ಅವರ ಸರ್ಕಾರಿ ವಸತಿಗೃಹದ ಮೇಲೆ ಮರ ಬಿದ್ದಿದೆ.
ಮನೆಯಲ್ಲಿ ಇದ್ದವರಿಗೆ ಯಾವುದೆ ಸಮಸ್ಯೆ ಆಗಿಲ್ಲ. ಮರ ಬಿದ್ದಿದ್ದರಿಂದ ಮನೆ ನೆಲಸಮವಾಗಿದೆ. ಮನೆ ಮುಂಭಾಗ ನಿಲ್ಲಿಸಿದ್ದ ಬೈಕ್’ಗೆ ಹಾನಿಯಾಗಿದೆ.
ಇನ್ನು, ವಿಚಾರ ತಿಳಿದು ಅರಲಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಆರ್.ಮೇಘರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೌರಮ್ಮ ಅವರಿಗೆ ಹೊಸ ವಸತಿ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200