ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ನವೆಂಬರ್ 2021
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್’ಗೆ ನಡೆಯಲಿರುವ ಚುನಾವಣಾ ಕಣದಿಂದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಇದರಿಂದಾಗಿ ನಾಲ್ವರು ಮಾತ್ರ ಚುನಾವಣಾ ಕಣದಲ್ಲಿದ್ದಾರೆ.
ಆರು ಅಭ್ಯರ್ಥಿಗಳಿದ್ದರು
ಕಾಂಗ್ರೆಸ್, ಬಿಜೆಪಿ, ಜೆಡಿಯು ಪಕ್ಷದ ಅಭ್ಯರ್ಥಿಗಳು ಸೇರಿದಂತೆ ಆರು ಮಂದಿ ಚುನಾವಣ ಕಣದಲ್ಲಿದ್ದರು. ಈಗ ಇಬ್ಬರು ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದಾರೆ. ಅಂತಿಮವಾಗಿ ನಾಲ್ವರು ಕಣ್ಣದಲ್ಲಿದ್ದಾರೆ.
ಯಾರೆಲ್ಲ ನಾಮಪತ್ರ ಹಿಂಪಡೆದಿದ್ದಾರೆ?
ಕಾಂಗ್ರೆಸ್ ಪಕ್ಷದಿಂದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ವೈ.ಹೆಚ್.ನಾಗರಾಜ್ ಅವರು ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ಇನ್ನು, ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಭುಜಂಗ.ಪಿ.ಎಸ್ ಅವರು ನಾಮಪತ್ರ ಹಿಂಪಡೆದಿದ್ದಾರೆ.
ಯಾರೆಲ್ಲ ಕಣದಲ್ಲಿ ಇದ್ದಾರೆ?
ಇಬ್ಬರು ನಾಮಪತ್ರ ಹಿಂಪಡೆದಿರುವುದರಿಂದ ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದ ಆರ್.ಪ್ರಸನ್ನಕುಮಾರ್, ಬಿಜೆಪಿಯ ಡಿ.ಎಸ್.ಅರುಣ್, ಜೆಡಿಯು ಪಕ್ಷದ ಶಶಿಕುಮಾರ್, ಪಕ್ಷೇತರ ಅಭ್ಯರ್ಥಿ ರವಿ.ಪಿ.ವೈ ಅವರು ಕಣದಲ್ಲಿದ್ದಾರೆ.