SHIVAMOGGA LIVE NEWS | 19 SEPTEMBER 2023
SHIMOGA : ತುಂಗಾ ನದಿಯಲ್ಲಿ (Tunga River) ಮೀನು ಹಿಡಿಯಲು (Fishing) ಹೋಗಿದ್ದ ಇಬ್ಬರು ಯುವಕರು ನೀರುಪಾಲಾಗಿದ್ದಾರೆ. ಈ ಪೈಕಿ ಓರ್ವನ ಮೃತದೇಹ ಪತ್ತೆಯಾಗಿದೆ. ಮತ್ತೊಬ್ಬನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಶಿವಮೊಗ್ಗದ ಕುರುಬರ ಪಾಳ್ಯದಲ್ಲಿ ಘಟನೆ ಸಂಭವಿಸಿದೆ. ಸಾವಾಯಿ ಪಾಳ್ಯದ ಮೋಯಿನ್ ಖಾನ್ ಮತ್ತು ಇಲಿಯಾಸ್ ನಗರದ ಅಂಜುಂ ಖಾನ್ ಮೀನಿ ಹಿಡಿಯಲು ತೆರಳಿದ್ದರು. ಇಬ್ಬರು ನೀರುಪಾಲಾಗಿರುವ ಕುರಿತು ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ಒಬ್ಬನ ಮೃತದೇಹ ಪತ್ತೆ
ವಿಚಾರ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದರು. ಈ ವೇಳೆ ಮೋಯಿನ್ ಖಾನ್ ಮೃತದೇಹ ಪತ್ತೆಯಾಗಿದೆ. ಅದನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಅಂಜುಂ ಖಾನ್ಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಇದನ್ನೂ ಓದಿ – ಭದ್ರಾವತಿಯಲ್ಲಿ ಮಹಿಳೆಯ ಕೊಲೆ, ಸಿಂಗಾರಿ ಅರೆಸ್ಟ್
ಮೋಯಿನ್ ಖಾನ್ ಖಾಸಗಿ ಕಾಲೇಜಿನಲ್ಲಿ ಪ್ರಥಮ ಬಿಸಿಎ ಓದುತ್ತಿದ್ದ. ಅಂಜುಂ ಖಾನ್ ಪ್ರಥಮ ಬಿಎ ಓದುತ್ತಿದ್ದ. ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.