ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE NEWS | 15 FEBRURARY 2023
SHIMOGA : ಪಾಳು ಮನೆಯೊಂದರ ಮುಂದೆ ಅಸ್ವಸ್ಥಳಾಗಿ ಬಿದ್ದಿದ್ದ ಮಹಿಳೆಯೊಬ್ಬರು (woman) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆಕೆಯ ಗುರುತು ಪತ್ತೆಯಾಗದ ಹಿನ್ನೆಲೆ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ.

ಮಿಳಘಟ್ಟ ರಸ್ತೆಯ ಶಿವಾಜಿ ಮರಾಠ ಟ್ರಸ್ಟ್ ಅಂಬಾ ಭವಾನಿ ದೇವಸ್ಥಾನ ಆವರಣದ ಪಾಳು ಮನೆಯ ಮುಂಭಾಗ ಮಹಿಳೆ ಅಸ್ವಸ್ಥಳಾಗಿ ಬಿದ್ದಿದ್ದರು. ಫೆ.8ರಂದು ಮಹಿಳೆಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದ ಆಟೋಗಳಿಗೆ ಪೊಲೀಸರಿಂದ 3 ಸೂಚನೆ, ಡಿಸ್ ಪ್ಲೇ ಕಾರ್ಡ್ ವಿತರಣೆ, ಏನಿದು? ಕಾರ್ಡಿನಲ್ಲಿ ಏನೇನಿದೆ?
ಮಹಿಳೆಗೆ ಸುಮಾರು 35 ವರ್ಷವಾಗಿದೆ. ತಲೆಗೆ ಬಿದ್ದ ಪೆಟ್ಟಿನಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮೃತಳು ಸುಮಾರು 5.3 ಅಡಿ ಎತ್ತರ, ತಲೆಯಲ್ಲಿ 8 ಇಂಚು ಕಪ್ಪು ಕೂದಲು, ಎಡಗೈ ಮೇಲೆ ‘ಪಾಪಿ ಪ್ರೀತಿ ಕಾವ್ಯ *+ಪಾಪಿ’ ಎಂಬ ಹಚ್ಚೆ ಗುರುತು ಇದೆ. ಬಲಗೈ ಮೆಲೆ ಕರಿಬಸಮ್ಮ ತಾಸ್ಮಿನ್ ಎಂಬ ಹಚ್ಚೆಯ ಗುರುತು ಇದೆ. ವಾರಸುದಾರರು ಯಾರಾದರೂ ಇದ್ದರೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08182-261418, 9480803330 ಗೆ ಮಾಹಿತಿ ನೀಡಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ – ‘ಶಿವಮೊಗ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಎದುರು ಕಪ್ಪು ಬಾವುಟ ಪ್ರದರ್ಶಿಸುತ್ತೇವೆ’

CLICK HERE TO JOIN SHIVAMOGGA LIVE WHATSAPP GROUP




