ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ನವೆಂಬರ್ 2021
ತೈಲೋತ್ಪನ್ನಗಳ ಮೇಲೆ ರಾಜ್ಯ ಸರ್ಕಾರ ವಿಧಿಸುತ್ತಿದ್ದ ತೆರಿಗೆ ಕಡಿತಗೊಳಿಸಲಾಗಿದೆ. ಇದರಿಂದ ಶಿವಮೊಗ್ಗದಲ್ಲಿ ಪೆಟ್ರೋಲ್, ಡಿಸೇಲ್ ದರದಲ್ಲಿ ಇಳಿಕೆಯಾಗಿದೆ. ಆದರೂ ಪೆಟ್ರೋಲ್ ರೇಟ್ ನೂರು ರೂ.ಗಿಂತಲೂ ಕೆಳಗಿಳಿದಿಲ್ಲ.
ಶಿವಮೊಗ್ಗದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 7.16 ರೂ. ಇಳಿಕೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಇವತ್ತು ಪ್ರತಿ ಲೀಟರ್ ಪೆಟ್ರೋಲ್’ಗೆ 102.08 ರೂ. ಇದೆ.
ನೂರಕ್ಕಿಂತ ಕೆಳಗಿಳಿಯದ ಪೆಟ್ರೋಲ್ ರೇಟ್
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆರಿಗೆ ಕಡಿತಗೊಳಿಸಿದ್ದರಿಂದ ಕೆಳೆದ ಎರಡು ದಿನದಲ್ಲಿ 13.44 ರೂ. ಇಳಿಕೆಯಾಗಿದೆ. ಇದರಿಂದ ಪೆಟ್ರೋಲ್ ದರ 115.52ರಿಂದ 102.08 ರೂ.ಗೆ ತಲುಪಿದೆ. ಇಷ್ಟು ತೆರಿಗೆ ಕಡಿತಗೊಳಿಸಿದರೂ, ಪ್ರತಿ ಲೀಟರ್ ಪೆಟ್ರೋಲ್ ದರ ನೂರು ರೂ.ಗಿಂತಲೂ ಹೆಚ್ಚಿಗೆ ಇರುವುದು ವಾಹನ ಸವಾರರಿಗೆ ಚಿಂತೆಗೀಡು ಮಾಡಿದೆ.
ಡಿಸೇಲ್ ರೇಟು ಕಡಿತ
ಪ್ರತಿ ಲೀಟರ್ ಡಿಸೇಲ್ ಮೇಲೆ 7.11 ರೂ. ತೆರಿಗೆ ಕಡಿತಗೊಳಿಸಲಾಗಿದೆ. ಇದರಿಂದ ಶಿವಮೊಗ್ಗದಲ್ಲಿ ಡಿಸೇಲ್ ದರ 86.30 ರೂ.ಗೆ ತಲುಪಿದೆ. ಕೇಂದ್ರ ಸರ್ಕಾರ 12.45 ರೂ. ತೆರಿಗೆ ಕಡಿತಗೊಳಿಸಿತ್ತು. ರಾಜ್ಯ ಸರ್ಕಾರ ಇವತ್ತು 7.11 ರೂ. ಕಡಿತ ಮಾಡಿದೆ. ಇದರಿಂದ 19.56 ರೂ. ಇಳಿಕೆಯಾಗಿದೆ.
ವರ್ಷದ ಹಿಂದಿನ ರೇಟ್
ಕಳೆದ ವರ್ಷ ಈ ಹೊತ್ತಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್’ಗೆ 84.96 ರೂ. ಇತ್ತು. ಆರು ತಿಂಗಳ ಹಿಂದೆ 94.77 ರೂ. (ಏಪ್ರಿಲ್ 5) ಇತ್ತು. ಮೂರು ತಿಂಗಳ ಹಿಂದೆ ಪ್ರತಿ ಲೀಟರ್’ಗೆ 104.59 ರೂ. (ಜುಲೈ 5) ಇತ್ತು.
ಇನ್ನು, ಕಳೆದ ವರ್ಷ ಶಿವಮೊಗ್ಗದಲ್ಲಿ ಡಿಸೇಲ್ ದರ ಪ್ರತಿ ಲೀಟರ್’ಗೆ 75.69 ರೂ. ಇತ್ತು. ಆರು ತಿಂಗಳ ಹಿಂದೆ 86.75 ರೂ. (ಏಪ್ರಿಲ್ 5), ಮೂರು ತಿಂಗಳ ಹಿಂದೆ 95.91 ರೂ. (ಜುಲೈ 5) ಇತ್ತು.
ತೈಲೋತ್ಪನ್ನಗಳು, ಅಡುಗೆ ಅನಿಲದ ದರ ಹೆಚ್ಚಳದಿಂದಾಗಿ ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ತೆರಿಗೆ ಕಡಿತಗೊಳಿಸಿರುವುದು ಜನರು ಸ್ವಲ್ಪ ನಿರಾಳರಾಗುವಂತೆ ಮಾಡಿದೆ. ಆದರೆ ಪೆಟ್ರೋಲ್ ದರ ನೂರು ರೂ.ಗಿಂತಲೂ ಕಡಿಮೆಯಾಗದಿರುವುದು ಮತ್ತು ಡಿಸೇಲ್ ದರ ನಿರೀಕ್ಷೆಯಷ್ಟು ಇಳಿಕೆಯಾಗಿಲ್ಲ ಎಂಬ ಅಸಮಾಧಾನವು ಇದೆ.
ಶಿವಮೊಗ್ಗದಲ್ಲಿ ಇದೆ ಮೊದಲು..! ಏಳು ನಿಮಿಷದಲ್ಲಿ ರೆಡಿಯಾಗುತ್ತೆ ಕೇಕ್.. ಮೂರು ದಿನ ಭರ್ಜರಿ ಆಫರ್.