SHIVAMOGGA LIVE NEWS | TRUCK| 08 ಮೇ 2022
ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿಯೊಂದು ಕೆರೆಗೆ ಇಳಿದಿದೆ. ಅದೃಷ್ಟವಶಾತ್ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಆನಂದಪುರ ಸಮೀಪ ರಾಷ್ಟ್ರೀಯ ಹೆದ್ದಾರಿ 206ಕ್ಕೆ ಹೊಂದಿಕೊಂಡಿರುವ ಗಾಣಿಗನ ಕೆರೆಗೆ ಶನಿವಾರ ಟಿಪ್ಪರ್ ಕೆರೆಗೆ ಇಳಿದಿದೆ. ಟಿಪ್ಪರ್ ಕೆರೆಯ ಕಡೆಗೆ ವಾಲುತ್ತಿದ್ದಂತೆ ಚಾಲಕ ಇರುವಕ್ಕಿ ಗ್ರಾಮದ ಮಣಿಕಂಠ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾನೆ.
ದಾಸಕೊಪ್ಪದಲ್ಲಿರುವ ಗ್ಯಾರೇಜ್ನಲ್ಲಿ ಜನರಲ್ ಸರ್ವಿಸ್ ಮಾಡಿಸಿಕೊಂಡು ಖಾಲಿ ವಾಹನವನ್ನು ಯಡೇಹಳ್ಳಿಗೆ ತರುತ್ತಿದ್ದಾಗ ಅಪಘಾತವಾಗಿದೆ. ವಾಹನದ ಮುಂಭಾಗ ಕೆರೆಯ ಕೆಸರಿನಲ್ಲಿ ಹೂತಿದ್ದು ಉಳಿದ ಭಾಗ ಕೆರೆಯ ಕಲ್ಲಿನ ಮೆಟ್ಟಿಲಿನ ಮೇಲೆ ನಿಂತಿದೆ.
ಟಿಪ್ಪರ್ ಅಪ್ಪಳಿಸಿದ ರಭಸಕ್ಕೆ ಕೆರೆಯ ಕಡೆ ವಾಹನ ಬೀಳದಂತೆ ಅಳವಡಿಸಲಾದ ಕಬ್ಬಿಣದ ಬ್ಯಾರೀಕೇಡ್ ಮುರಿದು ಹೋಗಿವೆ. ಸುದ್ದಿ ತಿಳಿಯುತ್ತಿದ್ದಂತೆ ಆನಂದಪುರ, ಯಡೇಹಳ್ಳಿ ಮತ್ತು ದಾಸಕೊಪ್ಪ ಭಾಗದ ನೂರಾರು ಜನರು ವೀಕ್ಷಿಸಲು ಆಗಮಿಸಿ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಆನಂದಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.
ಇದನ್ನೂ ಓದಿ – ಮದುವೆ ಮನೆಯಲ್ಲಿ ಊಟ ಮಾಡಿದವರಿಗೆ ವಾಂತಿ, ಭೇದಿ, ಮೆಗ್ಗಾನ್ ಆಸ್ಪತ್ರೆಗೆ ದಾಖಲು