ಶಿವಮೊಗ್ಗ ಲೈವ್.ಕಾಂ | SHIMOGA | 29 ಫೆಬ್ರವರಿ 2020
ನಗರದ ಹೆಲಿಪ್ಯಾಡ್ನಲ್ಲಿ ಪೂರ್ವ ಪರವಾನಗಿ ಇಲ್ಲದೇ ಖಾಸಗಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಿದ ಕಂಪನಿಗೆ ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದಾರೆ.
ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರನ್ನು ಕರೆತಂದ ಹೆಲಿಕಾಪ್ಟರ್ ಜಿಲ್ಲಾಡಳಿತದಿಂದ ಪೂರ್ವ ಪರವಾನಗಿ ಪಡೆಯಬೇಕು. ಆದರೆ, ಯಾವುದೇ ಮಾಹಿತಿ ನೀಡದೇ ಏಕಾಏಕಿ ಹೆಲಿಪ್ಯಾಡ್ನಲ್ಲಿ ಗುರುವಾರ ನಿಲ್ಲಿಸಲಾಗಿದೆ. ಮಾರಿಕಾಂಬ ಜಾತ್ರೆ ಪ್ರಯುಕ್ತ ಹೆಲಿಟೂರಿಸ್ಂಗೆ ಮಾತ್ರ ಪರವಾನಗಿ ನೀಡಲಾಗಿದೆ. ಅದನ್ನು ಬಿಟ್ಟು ಬೇರೆಯ ಹೆಲಿಕಾಪ್ಟರ್ಗಳನ್ನು ಲ್ಯಾಂಡ್ ಮಾಡುವುದಕ್ಕೆ ಅವಕಾಶವಿಲ್ಲ.
ನಿಯಮ ಮೀರಿ ಬೇರೆಯ ಹೆಲಿಕಾಪ್ಟರ್ ತಂದು ನಿಲ್ಲಿಸಲಾಗಿದೆ. ತಕ್ಷಣ ಈ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಸಿಕ್ಕಿದ್ದೇ ಹೆಲಿಪ್ಯಾಡ್ನಲ್ಲೇ ವಿಚಾರಣೆಗೆ ಒಳಪಡಿಸಲಾಗಿದೆ. ನಂತರ, ನೋಟಿಸ್ ನೀಡಿ ಬಿಡುಗಡೆಗೊಳಿಸಿದೆ. ಆದರೆ, ಬರುವ ಬುಧವಾರದಂದು ಕಂಪನಿಯವರು ಇದಕ್ಕೆ ಸ್ಪಷ್ಟನೆ ನೀಡುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ, ಸಮರ್ಪಕ ಸ್ಪಷ್ಟನೆ ನೀಡದಿದ್ದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದ್ದಾರೆ.
- ಶಿವಮೊಗ್ಗ – ಚಿಕ್ಕಮಗಳೂರು ವಿಧಾನ ಪರಿಷತ್ ಮಾಜಿ ಸದಸ್ಯ ನಿಧನ
- ಶಿವಮೊಗ್ಗದಲ್ಲಿ ಚುನಾವಣಾ ಕಚೇರಿ ಶುರು ಮಾಡಿದ ಆಯನೂರು ಮಂಜುನಾಥ್, ಕುತೂಹಲ ಮೂಡಿಸಿದ ನಡೆ
- ಡ್ಯೂಟಿ ಮುಗಿಸಿ ಆಸ್ಪತ್ರೆಯಿಂದ ಹೊರ ಬಂದ ಡಾಕ್ಟರ್ಗೆ ಕಾದಿತ್ತು ಶಾಕ್
- ಶಿವಮೊಗ್ಗ KSRTC ಬಸ್ ನಿಲ್ದಾಣಕ್ಕೆ ಕಂಟಕವಾಯ್ತು 3ನೇ ಗೇಟ್, ಎಚ್ಚೆತ್ತುಕೊಳ್ಳದಿದ್ದರೆ ಅಪಘಾತ ಫಿಕ್ಸ್
- ಶಿವಮೊಗ್ಗಕ್ಕೆ ಬಂದಿದ್ದ 10 ಸರ್ಕಾರಿ ಹೈಟೆಕ್ ಬಸ್ಗಳ ಪೈಕಿ 8 ಬಸ್ ವಾಪಸ್, ಈ ನಿರ್ಧಾರವೇಕೆ?
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]