ಶಿವಮೊಗ್ಗ ಲೈವ್.ಕಾಂ | 30 ಮಾರ್ಚ್ 2019
ವಿಧಾನಸಭೆ ಚುನಾವಣೆ ಸಂದರ್ಭ ಹೆಲಿಕಾಪ್ಟರ್’ನಲ್ಲಿ ಹೋಗಿ ಶಿಕಾರಿಪುರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿ, ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧವೇ ಸ್ಪರ್ಧಿಸಿದ್ದ ವಿನಯ್ ರಾಜವತ್, ಲೋಕಸಭೆ ಚುನಾವಣಾ ಆಖಾಡಕ್ಕೆ ಧುಮುಕುತ್ತಿದ್ದಾರೆ. ಈ ವಿಭಿನ್ನ ಶೈಲಿಯಲ್ಲಿ ಪ್ರಚಾರ ನಡೆಸಿ, ಮತ ಸೆಳೆಯಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿನಯ್ ರಾಜಾವತ್, ಏಪ್ರಿಲ್ 3 ಅಥವಾ 4ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.
ಹೆಲಿಕಾಪ್ಟರ್’ನಲ್ಲೇ ಕ್ಷೇತ್ರದಾದ್ಯಂತ ಪ್ರಚಾರ
ವಿಧಾನಸಭೆ ಚುನಾವಣೆ ಸಂದರ್ಭ, ನಾಮಪತ್ರ ಸಲ್ಲಿಸಲು ಹೆಲಿಕಾಪ್ಟರ್’ನಲ್ಲಿ ತೆರಳಿದ್ದ ವಿನಯ್ ರಾಜವಾತ್, ಈ ಬಾರಿ, ಇಡೀ ಪ್ರಚಾರವನ್ನೇ ಹೆಲಿಕಾಪ್ಟರ್ ಮೂಲಕ ನಡೆಸಲು ನಿರ್ಧರಿಸಿದ್ದಾರೆ. ಕ್ಷೇತ್ರದಾದ್ಯಂತ ಹೆಲಿಕಾಪ್ಟರ್’ನಲ್ಲಿ ತೆರಳಿ, ಕ್ಯಾಂಪೇನ್ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಯಡಿಯೂರಪ್ಪ ರಾಜೀನಾಮ ಕೊಡ್ತಾರೆ
ಲೋಕಸಭೆ ಚುನಾವಣೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ರಾಜೀನಾಮೆ ನೀಡಲಿದ್ದಾರೆ. ಅದಕ್ಕೆ ಬೇಕಾದ ಪೂರಕ ದಾಖಲೆಗಳು ಇರುವುದಾಗಿ ವಿನಯ್ ರಾಜಾವತ್ ತಿಳಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]