ಶಿವಮೊಗ್ಗ ಲೈವ್.ಕಾಂ | ಭದ್ರಾವತಿ | 8 ಸೆಪ್ಟೆಂಬರ್ 2019
ಮನೆ ಒಳಗಿನ ಗೋಡೆ ಕುಸಿದು ವ್ಯಕ್ತಿಯೊಬ್ಬರು ಕೊನೆಯುಸಿರೆಳೆದಿದ್ದಾರೆ. ಮೂವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಭದ್ರಾವತಿಯ ಹೊಸ ಸಿದ್ದಾಪುರ ಗ್ರಾಮದ ನಂಜಾಪುರ ರಸ್ತೆಯಲ್ಲಿರುವ ಮನೆಯೊಂದರ ಒಳಗಿನ ಗೋಡೆ ಕುಸಿದು ಗುರು (40) ಸಾವನ್ನಪ್ಪಿದ್ದಾರೆ. ಮಧ್ಯರಾತ್ರಿ ಮನೆಯಲ್ಲಿದ್ದ ಎಲ್ಲರು ಮಲಗಿದ್ದ ವೇಳೆ ಗೋಡೆ ಕುಸಿದು, ಗುರು ಅವರ ಮೇಲೆ ಬಿದ್ದಿದೆ. ಗಂಭೀರ ಗಾಯಗೊಂಡಿದ್ದ ಗುರು ಸ್ಥಳದಲ್ಲೆ ಅಸುನೀಗಿದ್ದಾರೆ.
ಹೆಂಡತಿ, ಮಕ್ಕಳಿಗೆ ಗಾಯ
ಗೋಡೆ ಕುಸಿತದಿಂದ ಗುರು ಅವರ ಪತ್ನಿ ಮತ್ತು ಮಕ್ಕಳಿಗು ಗಾಯವಾಗಿದೆ. ಗಂಗಮ್ಮ (33), ಮಂಜುನಾಥ್ (16), ಭೂಮಿಕಾ (14) ಅವರಿಗೆ ಸಣ್ಣಪುಟ್ಟ ಗಾಯವಾಗಿದೆ. ಮೂವರನ್ನು ಭದ್ರಾವತಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]