ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 20 DECEMBER 2022
ಶಿವಮೊಗ್ಗ : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ದರವನ್ನು (water tax) ಪರಿಷ್ಕರಿಸಲಾಗಿದೆ. ಈಗಾಗಲೆ ನೀರಿನ ಕಂದಾಯ ಪಾವತಿ ಮಾಡಿರುವವರು ವ್ಯತ್ಯಾಸದ ಮೊತ್ತವನ್ನು ಕಟ್ಟಬೇಕು ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಶಿವಮೊಗ್ಗ ನಗರವನ್ನು ನಗರಸಭೆಯಿಂದ ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಿದ ಹಿನ್ನೆಲೆ ಸರ್ಕಾರ ಮತ್ತು ಪಾಲಿಕೆ ನಿರ್ದೇಶನದಂತೆ ದರ (water tax) ಪರಿಷ್ಕರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಇದನ್ನೂ ಓದಿ – ಶಿವಮೊಗ್ಗದ ಈ ಆಟೋ ಈಗ ‘ಪುನೀತ ರಥ’, ಚಾಲಕನ ಮನೆ, ಮನ, ಮೊಬೈಲ್ ತುಂಬಾ ಅಪ್ಪು ಅಮರ
ಮೀಟರ್ ರಹಿತ ಸಂಪರ್ಕಗಳಿಗೆ ಪ್ರತಿ ತಿಂಗಳು ಗೃಹಬಳಕೆ ಸಂಪರ್ಕಕ್ಕೆ 175 ರೂ., ಗೃಹೇತರ ಸಂಪರ್ಕಕ್ಕೆ 350 ರೂ. ನಿಗದಿಪಡಿಸಲಾಗಿದೆ. 2022-23 ನೇ ಸಾಲಿನಿಂದ ನೀರಿನ ಕಂದಾಯವನ್ನು ಪರಿಷ್ಕೃತ ದರದಂತೆ ಪಾವತಿಸಬೇಕು. ಈಗಾಗಲೇ ನೀರಿನ ಕಂದಾಯ ಪಾವತಿಸಿರುವ ಖಾತೆದಾರರು ಪರಿಷ್ಕೃತ ದರದ ವ್ಯತ್ಯಾಸದ ಮೊತ್ತ ಪಾವತಿಸಬೇಕು ಎಂದು ತಿಳಿಸಲಾಗಿದೆ.