ಶಿವಮೊಗ್ಗದಿಂದ ವಿಮಾನ ಹಾರಾಟ ಶುರು

ಆಗಸ್ಟ್‌ 31ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಆರಂಭ

ಬೆಂಗಳೂರು – ಶಿವಮೊಗ್ಗ ಮಧ್ಯೆ ಪ್ರತಿದಿನ ಇಂಡಿಗೋ ವಿಮಾನ ಹಾರಾಟ ನಡೆಸಲಿದೆ

ಪ್ರತಿದಿನ ಬೆಳಗ್ಗೆ 9.50ಕ್ಕೆ ಬೆಂಗಳೂರಿನಿಂದ ಹೊರಟು ಬೆಳಗ್ಗೆ 11.05ಕ್ಕೆ ಶಿವಮೊಗ್ಗ ತಲುಪಲಿದೆ.

ಬೆಳಗ್ಗೆ 11.20ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 12.25ಕ್ಕೆ ಬೆಂಗಳೂರು ವಿಮಾನ ನಿಲ್ದಾಣ ತಲುಪಲಿದೆ.

ಮೊದಲ ದಿನದ ವಿಮಾನಯಾನಕ್ಕೆ ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸದ್ಯದಲ್ಲೇ ತಿರುಪತಿ, ಗೋವಾ, ಹೈದರಾಬಾದ್‌ ನಗರಗಳಿಗೆ ವಿಮಾನಯಾನ ಸೇವೆ ಶುರುವಾಗಲಿದೆ.

ಸ್ಪೈಸ್‌ ಜೆಟ್‌, ಸ್ಟಾರ್‌ ಏರ್‌ ಲೈನ್ಸ್‌ ಮತ್ತು ಅಲಯನ್ಸ್‌ ಏರ್‌ ಲೈನ್‌ ಸಂಸ್ಥೆಗಳು ಈ  ಮಾರ್ಗದಲ್ಲಿ ಸಂಚರಿಸಲಿವೆ.

2023ರ ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿದ್ದರು.

ಶಿವಮೊಗ್ಗ ಜಿಲ್ಲೆಯ ಸುದ್ದಿಗಳಿಗಾಗಿ  shivamoggalive.com ಓದಿ ಜಿಲ್ಲೆಯ ನಂಬರ್‌ 1 ವೆಬ್‌ಸೈಟ್‌