ಶಿವಮೊಗ್ಗ ಸರ್ಜಿ ಆಸ್ಪತ್ರೆ ಇನ್ಮುಂದೆ ಪೇಪರ್‌ ಲೆಸ್‌

ರೋಗಿಯ ಪ್ರತಿ ವಿವರವು ಇನ್ಮುಂದೆ ಡಿಜಿಟಲ್‌ ರೂಪದಲ್ಲಿ ಸಂಗ್ರಹವಾಗಲಿದೆ

ವೈದ್ಯರು ಮತ್ತು ನರ್ಸಿಂಗ್‌ ಸಿಬ್ಬಂದಿ ಟ್ಯಾಬ್‌ಗಳಲ್ಲಿ ಡಿಜಿಟಲ್‌ ರೂಪದಲ್ಲಿ ಕೇಸ್‌ ಶೀಟ್‌ ದಾಖಲಿಸಲಿದ್ದಾರೆ

Arrow

"

ಸರ್ಜಿ ಸಮೂಹದ ಆಸ್ಪತ್ರೆಗಳಲ್ಲಿ ವರ್ಷಕ್ಕೆ ಸರಾಸರಿ 6.50 ಲಕ್ಷ ಎ4 ಪೇಪರ್ ಬಳಕೆ ಆಗುತ್ತಿದೆ. ಇನ್ಮುಂದೆ ಆ ಪ್ರಮೇಯ ತಪ್ಪಲಿದೆ. ಇದರಿಂದ 250 ಮರಗಳನ್ನು ಉಳಿಸಿದಂತಾಗಲಿದೆ. ಪೇಪರ್ ತಯಾರಿಗೆ ರಾಸಾಯನಿಕ ಬಳಕೆ, ಪರಿಸರ ಹಾನಿ ತಪ್ಪಲಿದೆ. - ಡಾ.ಧನಂಜಯ ಸರ್ಜಿ, ಸರ್ಜಿ ಸಮೂಹದ ಛೇರ್ಮನ್

ಎಲ್ಲ ವೈದ್ಯಕೀಯ ವರದಿ, ಪರೀಕ್ಷೆಗಳ ಮಾಹಿತಿ, ಔಷಧಗಳ ವಿತರಣೆಯು ಡಿಜಿಟಲ್‌ ಕೇಸ್‌ ಶೀಟ್‌ನಲ್ಲಿರಲಿದೆ ಪ್ರತಿ ರೋಗಿಗೆ ನೀಡುವ ಯುನಿಕ್‌ ಐಡಿ ನಂಬರ್‌ನ ಅಡಿಯಲ್ಲೇ ಕೇಸ್‌ ಶೀಟ್‌ ಸೇವ್‌ ಆಗಲಿದೆ

ಪ್ರತಿ ಆರು ಪೇಷೆಂಟ್‌ಗೆ ಒಂದು ಟ್ಯಾಬ್ ಮೀಸಲಿರಲಿದೆ. ನರ್ಸಿಂಗ್‌ ಸಿಬ್ಬಂದಿ ಇದರಲ್ಲಿ ವಿವರಗಳನ್ನು ದಾಖಲು ಮಾಡಬಹುದು. ಯಾರೆಂದರೆ ಅವರು ಇದನ್ನು ಎಡಿಟ್‌ ಮಾಡಲು ಸಾಧ್ಯವಾಗುವುದಿಲ್ಲ. ಡಿಸ್ಚಾರ್ಜ ಆಗುವಾಗ ರೋಗಿಯ ವಾಟ್ಸಪ್‌ಗೆ ವಿವರಗಳನ್ನು ಕಳುಹಿಸಲಾಗುತ್ತದೆ. ಮೂರು ವರ್ಷದವರೆಗೆ ವೈದ್ಯಕೀಯ ವಿವರಗಳು ನಮ್ಮ ಬಳಿ ಸಂಗ್ರಹವಾಗಿರಲಿದೆ.  - ಡಾ. ಧನಂಜಯ ಸರ್ಜಿ,  ಸರ್ಜಿ ಸಮೂಹದ ಛೇರ್ಮನ್‌

ರೋಗಿ ಡಿಸ್ಚಾರ್ಜ್‌ ಆಗುವಾಗ ವಾಟ್ಸಪ್‌ಗೆ ಡಿಸ್ಚಾರ್ಜ್‌ ಸಮರಿ ತಲುಪಲಿದೆ ಮೂರು ವರ್ಷದವರೆಗೆ ಈ ಡಿಜಿಟಲ್‌ ಕೇಸ್‌ ಶೀಟ್‌ ಸಂಗ್ರಹವಾಗಿರಲಿದೆ